Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಮಣಿಸಲು ಇನ್ನೂ ಎಷ್ಟು ರನ್ ಕಲೆ ಹಾಕಬೇಕೋ: ವಿಂಡೀಸ್ ನಾಯಕನ ಅಲವತ್ತು!

ಟೀಂ ಇಂಡಿಯಾ ಮಣಿಸಲು ಇನ್ನೂ ಎಷ್ಟು ರನ್ ಕಲೆ ಹಾಕಬೇಕೋ: ವಿಂಡೀಸ್ ನಾಯಕನ ಅಲವತ್ತು!
ಗುವಾಹಟಿ , ಮಂಗಳವಾರ, 23 ಅಕ್ಟೋಬರ್ 2018 (08:44 IST)
ಗುವಾಹಟಿ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಗುವಾಹಟಿಯಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ 322 ರನ್ ಗಳ ಬೃಹತ್ ಮೊತ್ತ ಪೇರಿಸಿಯೂ ಸೋತ ಮೇಲೆ ವಿಂಡೀಸ್ ನಾಯಕ ಜೇಸನ್ ಹೋಲ್ಡರ್ ನಿರಾಶೆಗೊಳಗಾಗಿದ್ದಾರೆ.

ಭಾರತದಂತಹ ತಂಡವನ್ನು ಸೋಲಿಸಲು ಇನ್ನೂ ಸ್ಕೋರ್ ಬೋರ್ಡ್ ನಲ್ಲಿ ಎಷ್ಟು ರನ್ ಕಲೆ ಹಾಕಬೇಕೋ ಗೊತ್ತಾಗುತ್ತಿಲ್ಲ ಎಂದು ಹೋಲ್ಡರ್ ಪಂದ್ಯದ ನಂತರ ಅಲವತ್ತುಗೈದಿದ್ದಾರೆ.

‘322 ರನ್ ಸಾಮಾನ್ಯ ಮೊತ್ತವಲ್ಲ. ಆರಂಭದಲ್ಲಿ ನನಗೂ ಹೀಗೇ ಅನಿಸಿತು. ಆದರೆ ಕೊನೆಯಲ್ಲಿ ಇನ್ನೂ 30 ರನ್ ಹೆಚ್ಚಿಗೆ ಮಾಡಬೇಕಿತ್ತು ಅನಿಸಿತು. ಭಾರತದಂತಹ ತಂಡದ ಎದುರು ಎಷ್ಟು ರನ್ ಕಲೆ ಹಾಕಬೇಕೆಂದು ನಿಮಗೆ ಗೊತ್ತಾಗಲ್ಲ’ ಎಂದು ಹೋಲ್ಡರ್ ಹೇಳಿಕೊಂಡಿದ್ದಾರೆ. ಈ ಪಂದ್ಯವನ್ನು 40 ಪ್ಲಸ್ ಎಸೆತ ಇರುವಾಗಲೇ ಟೀಂ ಇಂಡಿಯಾ 8 ವಿಕೆಟ್ ಗಳಿಂದ ಗೆದ್ದುಕೊಂಡಿತ್ತು,.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ಐಪಿಎಲ್ ನ ದುಬಾರಿ ಆಟಗಾರ ಯಾರಿರಬಹುದು ಗೊತ್ತೇ?!