Select Your Language

Notifications

webdunia
webdunia
webdunia
webdunia

ಮುಂದಿನ ಐಪಿಎಲ್ ನ ದುಬಾರಿ ಆಟಗಾರ ಯಾರಿರಬಹುದು ಗೊತ್ತೇ?!

ಮುಂದಿನ ಐಪಿಎಲ್ ನ ದುಬಾರಿ ಆಟಗಾರ ಯಾರಿರಬಹುದು ಗೊತ್ತೇ?!
ಮುಂಬೈ , ಮಂಗಳವಾರ, 23 ಅಕ್ಟೋಬರ್ 2018 (08:41 IST)
ಮುಂಬೈ: ಮುಂಬರುವ ಐಪಿಎಲ್ ನಲ್ಲಿ ಯಾವುದಾದರೂ ಒಂದು ತಂಡ ದುಬಾರಿ ಬೆಲೆ ಖರೀದಿಸಬಹುದಾದ ಆಟಗಾರ ಎಂದರೆ ಯಾರು ಗೊತ್ತೇ?

ಕ್ರಿಕೆಟಿಗ ಹರ್ಭಜನ್ ಸಿಂಗ್ ಈಗಾಗಲೇ ಆ ಆಟಗಾರ ಯಾರಿರಬಹುದೆಂದು ಭವಿಷ್ಯ ನುಡಿದಿದ್ದಾರೆ. ಭಾರತದ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನ ಶಿಮ್ರೋನ್ ಹೆಟ್ ಮೇರ್ ಶತಕ ಸಿಡಿಸಿದ ಪರಿ ನೋಡಿ ಭಜಿ ಇವರೇ ಮುಂದಿನ ಮಿಲಿಯನ್ ಡಾಲರ್ ಬೇಬಿ ಎಂದಿದ್ದಾರೆ.

ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಶತಕದ ಅಬ್ಬರವಿದ್ದರೂ ಹೆಟ್ ಮೇರ್ ರ ನಿರ್ಭಿಡೆಯ ಇನಿಂಗ್ಸ್, ಅವರ ಮಾರುದ್ದದ ಶಾಟ್ ಗಳನ್ನು ನೋಡಿ ಈ ಆಟಗಾರ ಮುಂದಿನ ಐಪಿಎಲ್ ನಲ್ಲಿ ದುಬಾರಿ ಆಟಗಾರನಾಗಿ ಬಿಕರಿಯಾಗುತ್ತಾನೆ ನೋಡುತ್ತಿರಿ ಎಂದು ಭಜಿ ಭವಿಷ್ಯ ನುಡಿದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ವಿಶಾಖಪಟ್ಟಣ ತಲುಪಿದ ಟೀಂ ಇಂಡಿಯಾ: ವಿರಾಟ್ ಕೊಹ್ಲಿಗಾಗಿ ಕಾದಿದೆ ದಾಖಲೆ