Select Your Language

Notifications

webdunia
webdunia
webdunia
webdunia

ವಿಂಡೀಸ್ ತಂಡವನ್ನು ಟೀಕಿಸಿ ಇಕ್ಕಟ್ಟಿಗೆ ಸಿಲುಕಿದ ಹರ್ಭಜನ್ ಸಿಂಗ್

ಹರ್ಭಜನ್ ಸಿಂಗ್
ಮುಂಬೈ , ಬುಧವಾರ, 10 ಅಕ್ಟೋಬರ್ 2018 (07:57 IST)
ಮುಂಬೈ: ರಾಜ್ ಕೋಟ್ ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಹೀನಾಯವಾಗಿ ಸೋತಿದ್ದನ್ನು ಟೀಕಿಸಿದ್ದ ಹರ್ಭಜನ್ ಸಿಂಗ್ ಇದೀಗ ಟ್ವಿಟರ್ ನಲ್ಲಿ ಟ್ರೋಲ್ ಗೊಳಗಾಗಿದ್ದಾರೆ.

ವಿಂಡೀಸ್ ತಂಡ ರಣಜಿ ಆಡಲೂ ಲಾಯಕ್ಕಿಲ್ಲ ಎಂದು ಭಜಿ ಟ್ವೀಟ್ ಮೂಲಕ ಲೇವಡಿ ಮಾಡಿದ್ದರು. ಇದಕ್ಕೆ ವಿಂಡೀಸ್ ನ ಮಾಜಿ ವೇಗಿ ಟಿನೊ ಬೆಸ್ಟ್ ತಿರುಗೇಟು ನೀಡಿದ್ದು, ಇಂತಹ ಟ್ವೀಟ್ ನೀವು ಇಂಗ್ಲೆಂಡ್ ವಿರುದ್ಧ ಆಡುವಾಗ ಕಾಣಲಿಲ್ಲ. ಹಾಗಿದ್ದರೂ ಯುವ ಆಟಗಾರರು ಕಲಿಯುತ್ತಾರೆ’ ಟಿನೊ ಟ್ವೀಟ್ ಮಾಡಿದ್ದಾರೆ.

ವಿಂಡೀಸ್ ಮಾಜಿ ವೇಗಿಗೆ ಭಾರತದ ಹಲವು ಕ್ರಿಕೆಟ್ ಅಭಿಮಾನಿ ಟ್ವಿಟರಿಗರೂ ಧ್ವನಿಗೂಡಿಸಿದ್ದಾರೆ. ನಿಮ್ಮಿಂದ ಇಂತಹ ಕಾಮೆಂಟ್ ನಿರೀಕ್ಷಿಸಿರಲಿಲ್ಲ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಇದೇ ಮಾತನ್ನು ಇಂಗ್ಲೆಂಡ್ ಮಾಜಿ ಕ್ರಿಕೆಟಿಗರು ಆವತ್ತು ನಮಗೆ ಹೇಳಿದ್ದರೆ ಹೇಗಿರುತ್ತಿತ್ತು? ಎಂದು ಇಂಗ್ಲೆಂಡ್ ನಲ್ಲಿ ಭಾರತದ ಕಳಪೆ ಪ್ರದರ್ಶನ ನೆನಪಿಸಿ ಪ್ರಶ್ನೆ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ಮೇಲೆ ಆಕರ್ಷಣೆ ಬೆಳೆಸಿಕೊಂಡ ಈ ಬ್ಯೂಟಿ ಕ್ವೀನ್ ಯಾರು ಗೊತ್ತಾ?