Select Your Language

Notifications

webdunia
webdunia
webdunia
webdunia

ರೋಹಿತ್ –ಕೊಹ್ಲಿ ನಾನಾ? ನೀನಾ? ಸ್ಪರ್ಧೆಗೆ ವಿಂಡೀಸ್ ಬೌಲರ್ ಗಳು ಬೇಸ್ತು

ರೋಹಿತ್ –ಕೊಹ್ಲಿ ನಾನಾ? ನೀನಾ? ಸ್ಪರ್ಧೆಗೆ ವಿಂಡೀಸ್ ಬೌಲರ್ ಗಳು ಬೇಸ್ತು
ಗುವಾಹಟಿ , ಸೋಮವಾರ, 22 ಅಕ್ಟೋಬರ್ 2018 (08:49 IST)
ಗುವಾಹಟಿ: ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಏಕದಿನ ಸರಣಿ ಗೆದ್ದಾಗಲೆಲ್ಲಾ ಟೀಂ ಇಂಡಿಯಾಕ್ಕೆ ವಿರಾಟ್ ಕೊಹ್ಲಿ ಶ್ರೇಷ್ಠ ನಾಯಕನಾ? ರೋಹಿತ್ ಶರ್ಮಾ ಸೂಕ್ತವಾ? ಎಂಬ ಪ್ರಶ್ನೆ ಮೂಡುತ್ತವೆ.

ಇವರಿಬ್ಬರ ತೆರೆಮರೆಯ ಮುಸುಕಿನ ಗುದ್ದಾಟವೂ ಅಭಿಮಾನಿಗಳಿಗೆ ಹೊಸತಲ್ಲ. ಆದರೆ ಅದೇ ಜಿದ್ದಾ ಜಿದ್ದಿನ ಆಟವನ್ನು ಇಬ್ಬರೂ ವೆಸ್ಟ್ ಇಂಡೀಸ್ ಬೌಲರ್ ಗಳ ಮೇಲೆ ಪ್ರಯೋಗಿಸಿ ಮೊದಲ ಏಕದಿನ ಪಂದ್ಯದಲ್ಲಿ ಆಡಿದ ರೀತಿಗೆ ಎದುರಾಳಿಗಳು ಉಡೀಸ್ ಆಗಿದ್ದಾರೆ.

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ವಿಂಡೀಸ್ ನೀಡಿದ್ದ 322 ರನ್ ಗಳ ಬೃಹತ್ ಮೊತ್ತವನ್ನು 42.1 ಓವರ್ ಗಳಲ್ಲೇ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿದೆ. ಇದರೊಂದಿಗೆ ಮೊದಲ ಏಕದಿನ ಪಂದ್ಯವನ್ನು 8 ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ.

ಭಾರತದ ಆರಂಭ ಉತ್ತಮವಾಗಿರಲಿಲ್ಲ. ಶಿಖರ್ ಧವನ್ ಕೇವಲ 4 ರನ್ ಗಳಿಸಿ ಔಟಾದಾಗ ಭಾರತದ ರನ್ ಗತಿಯೂ ಮಂದಗತಿಯಲ್ಲಿ ಸಾಗುತ್ತಿತ್ತು. ಈ ವೇಳೆ ರೋಹಿತ್ ಶರ್ಮಾ ಕೂಡಿಕೊಂಡ ನಾಯಕ ವಿರಾಟ್ ಕೊಹ್ಲಿ ಬಿರುಗಾಳಿಯಂತೆ ಬ್ಯಾಟ್ ಬೀಸಿದರು. ಅಲ್ಲಿಂದ ಭಾರತದ ರನ್ ಗೇರ್ ಬದಲಾಯಿತು.  ಕೊಹ್ಲಿ ಬ್ಯಾಟ್ ಬೀಸುತ್ತಿದ್ದಂತೆ ರೋಹಿತ್ ಶರ್ಮಾ ಕೂಡಾ ಆಟಕ್ಕೆ ಕುದುರಿಕೊಂಡು ಇಬ್ಬರೂ ಜಿದ್ದಿಗೆ ಬಿದ್ದವರಂತೆ ಎದುರಾಳಿಗಳ ಮೇಲೆ ಮುಗಿಬಿದ್ದರು. ಈ ನಡುವೆ ಕೊಹ್ಲಿ 107 ಎಸೆತಗಳಲ್ಲಿ 2 ಸಿಕ್ಸರ್, 21 ಬೌಂಡರಿಗಳೊಂದಿಗೆ 140 ರನ್ ಗಳಿಸಿ ಔಟಾದರು. ಆದರೆ ರೋಹಿತ್ ಕೊನೆಯವರೆಗೂ ನಾಟೌಟ್ ಆಗಿ ಉಳಿದು 117 ಎಸೆತಗಳಲ್ಲಿ 8 ಸಿಕ್ಸರ್, 15 ಬೌಂಡರಿಗಳೊಂದಿಗೆ 152 ರನ್ ಗಳಿಸಿ ಭಾರತವನ್ನು ಗೆಲುವಿನ ದಡ ಮುಟ್ಟಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿತ್ –ಕೊಹ್ಲಿ ನಾನಾ? ನೀನಾ? ಸ್ಪರ್ಧೆಗೆ ವಿಂಡೀಸ್ ಬೌಲರ್ ಗಳು ಬೇಸ್ತು