Publish Date: Sun, 21 Oct 2018 (09:21 IST)
Updated Date: Sun, 21 Oct 2018 (09:22 IST)
ಬೆಂಗಳೂರು: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಅದಕ್ಕೂ ಮೊದಲೇ ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಸುಳಿವೊಂದನ್ನು ಬಿಟ್ಟುಕೊಟ್ಟಿದ್ದಾರೆ.
ಈ ಪಂದ್ಯದ ಮೂಲಕ ರಿಷಬ್ ಪಂತ್ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡುವ ಸೂಚನೆಯನ್ನು ಟ್ವಿಟರ್ ಮೂಲಕ ನೀಡಿದ್ದಾರೆ. ಕೊಹ್ಲಿ ಅಂತಿಮ ಬಳಗವನ್ನು ಅನೌನ್ಸ್ ಮಾಡುವ ಮೊದಲೇ ರಿಷಬ್ ರಹಸ್ಯ ಬಿಟ್ಟುಕೊಟ್ಟಿದ್ದಾರೆ.
‘ಯಾವತ್ತೂ ಮೈದಾನದಲ್ಲಿ ಶೇ.100 ರಷ್ಟು ಕೊಡುಗೆ ನೀಡಲು ರೆಡಿಯಾಗಿರುತ್ತಿದ್ದೆ. ವೆಸ್ಟ್ ಇಂಡೀಸ್ ನ್ನು ಮೊದಲ ಏಕದಿನದಲ್ಲಿ ಎದುರಿಸಲು ಕಾತುರನನಾಗಿದ್ದೇನೆ’ ಎಂದು ರಿಷಬ್ ಟ್ವೀಟ್ ಮಾಡಿರುವುದು ಅವರು ಇಂದಿನ ಪಂದ್ಯದಲ್ಲಿ ಆಡುವ ಸುದ್ದಿಯನ್ನು ಖಚಿತಪಡಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.