Select Your Language

Notifications

webdunia
webdunia
webdunia
webdunia

ವೆಸ್ಟ್ ಇಂಡೀಸ್ ಸರಣಿ ಧೋನಿಗೆ ಮಹತ್ವದ್ದು ಯಾಕೆ ಗೊತ್ತಾ?

ಭಾರತ-ವೆಸ್ಟ್ ಇಂಡೀಸ್ ಏಕದಿನ
ಮುಂಬೈ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ಏಕದಿನ ಸರಣಿ ಹಿರಿಯ ಕ್ರಿಕೆಟಿಗ ಧೋನಿ ಪಾಲಿಗೆ ಮಹತ್ವದ್ದಾಗಲಿದೆ.

ಈಗಾಗಲೇ ಫಾರ್ಮ್ ಕಳೆದುಕೊಂಡರೂ ದೇಶೀಯ ಕ್ರಿಕೆಟ್ ನಲ್ಲಿ ಆಡಲು ಒಪ್ಪದ ಕಾರಣಕ್ಕೆ ಬಿಸಿಸಿಐ ಆಯ್ಕೆಗಾರರ ಕೆಂಗಣ್ಣಿಗೆ ಗುರಿಯಾಗಿರುವ ಧೋನಿ ವಿಶ್ವಕಪ್ ದೃಷ್ಟಿಯಿಂದ ಈ ಸರಣಿಯಲ್ಲಿ ರನ್ ಗಳಿಸಲೇಬೇಕಿದೆ.

ಇದುವರೆಗೆ ವಿಕೆಟ್ ಕೀಪಿಂಗ್ ನಲ್ಲಿ ಧೋನಿಗೆ ಸರಿಸಾಟಿಯಾದ ಆಟಗಾರನಿಲ್ಲ ಎಂದು ಕೊರಗುತ್ತಿದ್ದ ಟೀಂ ಇಂಡಿಯಾ ರಿಷಬ್ ಪಂತ್ ರೂಪದಲ್ಲಿ ಯುವ ಆಟಗಾರ ಸಿಕ್ಕಿರುವುದು ಧೋನಿಗೆ ಮತ್ತಷ್ಟು ಒತ್ತಡ ತಂದಿದೆ. ಇದೀಗ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಬೇಕಾದರೆ ಧೋನಿ ರನ್ ಗಳಿಸಲೇಬೇಕಾದ ಒತ್ತಡದಲ್ಲಿದೆ. ಹೀಗಾಗಿ ಮಾಜಿ ನಾಯಕ ಸೌರವ್ ಗಂಗೂಲಿ ಕೂಡಾ ವಿಶ್ವಕಪ್ ದೃಷ್ಟಿಯಿಂದ ಧೋನಿಗೆ ಈ ಸರಣಿ ಮಹತ್ವದ್ದು ಎಂದಿದ್ದಾರೆ. ಆದರೆ ಧೋನಿಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಗುತ್ತದಾ ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಮಣಿಸಲು ಇನ್ನೂ ಎಷ್ಟು ರನ್ ಕಲೆ ಹಾಕಬೇಕೋ: ವಿಂಡೀಸ್ ನಾಯಕನ ಅಲವತ್ತು!