Publish Date: Wed, 24 Oct 2018 (08:59 IST)
Updated Date: Wed, 24 Oct 2018 (09:00 IST)
ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಏಕದಿನ ಗೆದ್ದ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನನ್ನ ವೃತ್ತಿ ಜೀವನದಲ್ಲಿ ಇನ್ನು ಕೆಲವೇ ವರ್ಷ ಬಾಕಿ ಉಳಿದಿದೆ ಎಂದಿದ್ದರು. ಅವರು ಹೀಗೆ ಹೇಳಿದ್ದೇ ತಪ್ಪಾಗಿದೆ!
ಇದೀಗ ಅವರ ನಿವೃತ್ತಿ ಬಗ್ಗೆ ವದಂತಿಗಳು ಶುರುವಾಗಿದೆ. ಕೊಹ್ಲಿ ಇನ್ನು ಕೆಲವೇ ಸಮಯದಲ್ಲಿ ನಿವೃತ್ತಿಯಾಗುತ್ತಾರೆ ಎಂದೆಲ್ಲಾ ಯಾರೋ ಸುದ್ದಿ ಹಬ್ಬಿಸಿದ್ದಾರೆ. ಇದೀಗ ಈ ಬಗ್ಗೆ ಕೊಹ್ಲಿ ಬಾಲ್ಯದ ಕೋಚ್ ರಾಜ್ ಕುಮಾರ್ ಶರ್ಮಾ ಇದನ್ನೆಲ್ಲಾ ತಳ್ಳಿ ಹಾಕಿದ್ದಾರೆ.
ಕೊಹ್ಲಿ ಅಕಾಲಿಕವಾಗಿ ನಿವೃತ್ತಿಯಾಗುತ್ತಿಲ್ಲ. ಇದೆಲ್ಲಾ ಶುದ್ಧ ಸುಳ್ಳು. ಅವರು 40 ವರ್ಷದವರೆಗೂ ಆಡ್ತಾರೆ. ಅವರ ಫಿಟ್ ನೆಸ್, ಆಡುವ ತವಕ ಆ ಮಟ್ಟಿಗಿದೆ ಎಂದು ರಾಜ್ ಕುಮಾರ್ ಶರ್ಮಾ ಸ್ಪಷ್ಟನೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.