Select Your Language

Notifications

webdunia
webdunia
webdunia
webdunia

ಅದೃಷ್ಟ ಚೆನ್ನಾಗಿತ್ತು, ಟೀಂ ಇಂಡಿಯಾ ಮಾನ ಉಳಿಯಿತು

ಅದೃಷ್ಟ ಚೆನ್ನಾಗಿತ್ತು, ಟೀಂ ಇಂಡಿಯಾ ಮಾನ ಉಳಿಯಿತು
ವಿಶಾಖಪಟ್ಟಣ , ಗುರುವಾರ, 25 ಅಕ್ಟೋಬರ್ 2018 (07:19 IST)
ವಿಶಾಖಪಟ್ಟಣ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಸೋಲಲಿದ್ದ ಪಂದ್ಯವನ್ನು ಟೈ ಮಾಡಿಕೊಳ್ಳಲು ಟೀಂ ಇಂಡಿಯಾ ಯಶಸ್ವಿಯಾಗಿದೆ.

ಮೊದಲು ಬ್ಯಾಟ್ ಮಾಡಿದ್ದ ಟೀಂ ಇಂಡಿಯಾ ಎದುರಾಳಿಗೆ ಗೆಲ್ಲಲು 322 ರನ್ ನೀಡಿತ್ತು. ಇದು ಒಂದು ಪೈಪೋಟಿಯು ಮೊತ್ತವೇ ಆಗಿತ್ತು. ಆದರೆ ಮೊದಲ ಪಂದ್ಯದ ಹೀರೋ ಶಿಮ್ರೋನ್ ಹೆಟ್ ಮೇರ್ ಮತ್ತೆ ಸ್ಪೋಟಕ ಬ್ಯಾಟಿಂಗ್ ನಡೆಸಿ ವಿಂಡೀಸ್ ಗೆಲುವಿನ ಗುರಿ ಸುಲಭವಾಗಿಸಿದರು. ಒಂದು ಹಂತದಲ್ಲಿ ವಿಂಡೀಸ್ 45 ಓವರ್ ಗಳಲ್ಲೇ ಗೆಲ್ಲುವ ಸೂಚನೆ ನೀಡಿತ್ತು.

ಆದರೆ ಹೆಟ್ ಮ್ಯಾರ್ ವಿಕೆಟ್ ಕಳೆದುಕೊಂಡಾಗ ಪಂದ್ಯಕ್ಕೆ ತಿರುವು ಸಿಕ್ಕಿತು. ಹಾಗಿದ್ದರೂ ಶೈ ಹೋಪ್ ಶತಕ ಸಿಡಿಸಿ ತಂಡಕ್ಕೆ ಭರವಸೆ ಮೂಡಿಸಿದರು. ಕೊನೆಯ ಎಸೆತದವರೆಗೂ ಶಕ್ತಿಮೀರಿ ಹೋರಾಡಿದ ಹೋಪ್ ಅಂತಿಮವಾಗಿ ಗೆಲುವಿಗೆ ಐದು ರನ್ ಬೇಕಾಗಿದ್ದಾಗ ಸಿಕ್ಸರ್ ಸಿಡಿಸಲು ವಿಫಲರಾಗಿ ಬೌಂಡರಿಯೊಂದಿಗೆ ಪಂದ್ಯ ಟೈ ಮಾಡಿಕೊಂಡರು. ಇತ್ತ ಟೀಂ ಇಂಡಿಯಾ ಸೋಲಿನ ಅವಮಾನ ತಪ್ಪಿಸಿಕೊಂಡು ಸಮಾಧಾನಪಟ್ಟುಕೊಂಡಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿಯ ವಿಶ್ವದಾಖಲೆಯಿಂದ ಬಚವಾಯ್ತು ಟೀಂ ಇಂಡಿಯಾ