Publish Date: Thu, 25 Oct 2018 (08:54 IST)
Updated Date: Thu, 25 Oct 2018 (08:56 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಡುತ್ತಿರುವ ಪರಿ ನೋಡಿದರೆ ವಿಶ್ವದ ಯಾವುದೇ ಬೌಲರ್ ಗಳ ಎದೆ ನಡುಗುತ್ತದೆ. ಇದೀಗ ಬಾಂಗ್ಲಾ ಕ್ರಿಕೆಟಿಗರೊಬ್ಬರು ಕೊಹ್ಲಿಯನ್ನು ಮನುಷ್ಯನೇ ಅಲ್ಲ ಎಂದಿದ್ದಾರೆ.
ಬಾಂಗ್ಲಾದೇಶದ ಸ್ಟಾರ್ ಕ್ರಿಕೆಟಿಗ ತಮೀಮ್ ಇಕ್ಬಾಲ್ ಈ ಮಾತು ಹೇಳಿದ್ದಾರೆ. ಅವರು ಬ್ಯಾಟ್ ಮಾಡುವ ಪರಿ ನೋಡಿದರೆ ಸಾಮಾನ್ಯ ಮನುಷ್ಯನೇ ಅಲ್ಲ ಎನಿಸುತ್ತದೆ ಎಂದು ತಮೀಮ್ ಕೊಹ್ಲಿಯನ್ನು ಹೊಗಳಿದ್ದಾರೆ.
‘ನನಗೆ ಅವರು ಆಡುವುದನ್ನು ನೋಡಿದರೆ ಕೆಲವೊಮ್ಮೆ ಇವರು ಮನುಷ್ಯನೇ ಅಲ್ಲವೇನೋ ಎನಿಸುತ್ತದೆ. ಅವರು ಬ್ಯಾಟಿಂಗ್ ಮಾಡಲು ಕಣಕ್ಕಿಳಿಯುವುದನ್ನು ನೋಡಿದರೆ ಪ್ರತೀ ಪಂದ್ಯದಲ್ಲೂ ಶತಕ ಗ್ಯಾರಂಟಿ ಎನಿಸುತ್ತದೆ’ ಎಂದು ತಮೀಮ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.