Publish Date: Sat, 27 Oct 2018 (08:32 IST)
Updated Date: Sat, 27 Oct 2018 (08:33 IST)
ನವದೆಹಲಿ: ತಂಡಕ್ಕೆ ಉಪಯೋಗವಾಗುತ್ತೆ ಎಂದರೆ ಒಂದು ಓವರ್ ನಲ್ಲಿ ಆರು ಬಾರಿ ಡೈವ್ ಹೊಡೀಬೇಕು ಅಂದ್ರೂ ನಾನು ರೆಡಿ.. ಹೀಗಂತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.
ದೇಶಕ್ಕಾಗಿ ಆಡುವುದೆಂದರೆ ಯಾರಿಗೋ ಉಪಕಾರ ಮಾಡುವುದಲ್ಲ. ದೇಶಕ್ಕಾಗಿ ಆಡುವುದೆಂದರೆ ನಿಜಕ್ಕೂ ಗೌರವದ ಸಂಗತಿ. ಯಾವುದೂ ಸುಲಭದಲ್ಲಿ ಸಿಗುವಂತದ್ದಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಡುವ ಪ್ರತೀ ರನ್ ಗೆ ಈಗಲೂ ಬೆವರು ಹರಿಸಬೇಕು ಎಂದು ನಂಬಿರವವನು ನಾನು’ ಎಂದು ಕೊಹ್ಲಿ ಹೇಳಿದ್ದಾರೆ.
ಮೊನ್ನೆಯಷ್ಟೇ ಅತೀ ವೇಗದ 10 ಸಾವಿರ ರನ್ ಪೂರೈಸಿದ ವಿಶ್ವದಾಖಲೆ ಮಾಡಿದ್ದ ಕೊಹ್ಲಿ ನಾನು ನನ್ನ ದೇಶಕ್ಕಾಗಿ ಆಡಲು ಆಯ್ಕೆಯಾಗಿದ್ದೇನೆ. ಅದು ನನ್ನ ಕರ್ತವ್ಯ. ದೇಶಕ್ಕಾಗಿ ಪ್ರತೀ ರನ್ ಗಳಿಸುವುದು ನನ್ನ ಕರ್ತವ್ಯ ಎಂದುಕೊಂಡು ಆಡುತ್ತೇನೆ’ ಎಂದು ವಿರಾಟ್ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.