Publish Date: Sun, 28 Oct 2018 (09:13 IST)
Updated Date: Sun, 28 Oct 2018 (09:15 IST)
ಪುಣೆ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರನೇ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 43 ರನ್ ಗಳಿಂದ ಸೋತಿದೆ.
ಯಾವತ್ತಿನಂತೆ ಕೊಹ್ಲಿ ಒನ್ ಮ್ಯಾನ್ ಶೋ ಈ ಬಾರಿ ಟೀಂ ಇಂಡಿಯಾ ಪಾಲಿಗೆ ವರ್ಕೌಟ್ ಆಗಲಿಲ್ಲ. ಮೊದಲು ಬ್ಯಾಟಿಂಗ್ ಮಾಡಿದ್ದ ವಿಂಡೀಸ್ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 283 ರನ್ ಗಳಿಸಿತ್ತು.
ಈ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಆರಂಭದಲ್ಲೇ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಈ ಸಂದರ್ಭದಲ್ಲಿ ಜತೆಯಾದ ಶಿಖರ್ ಧವನ್, ವಿರಾಟ್ ಕೊಹ್ಲಿ ಕೊಂಚ ಹೊತ್ತು ಜತೆಯಾಟವಾಡಿದರೂ ನಂತರ ಒಂದೊಂದೇ ವಿಕೆಟ್ ಗಳು ನಿರಂತರವಾಗಿ ಬಿತ್ತು.
ಇನ್ನೊಂದೆಡೆ ಕೊಹ್ಲಿ ಎಂದಿನಂತೆ ಭರ್ಜರಿ ಆಟವಾಡಿ 107 ರನ್ ಗಳಿಸಿದರು. ಆದರೆ ಅವರಿಗೆ ಸರಿಯಾದ ಜತೆಗಾರ ಸಿಗದೇ ಟೀಂ ಇಂಡಿಯಾ 47.4 ಓವರ್ ಗಳಲ್ಲೇ 240 ರನ್ ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ವಿಂಡೀಸ್ ಬೌಲರ್ ಗಳ ಸಂಘಟಿತ ದಾಳಿಯೆದುರು ಟೀಂ ಇಂಡಿಯಾ ಮಕಾಡೆ ಮಲಗಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.