Select Your Language

Notifications

webdunia
webdunia
webdunia
webdunia

ಭಾರತ-ವೆಸ್ಟ್ ಇಂಡೀಸ್ ಏಕದಿನ: ಕೊಹ್ಲಿ ಸ್ಟೈಲಲ್ಲಿ ಶತಕ ಸಂಭ್ರಮಾಚರಣೆ ಮಾಡಿದ ರೋಹಿತ್ ಶರ್ಮಾ!

ಭಾರತ-ವೆಸ್ಟ್ ಇಂಡೀಸ್ ಏಕದಿನ: ಕೊಹ್ಲಿ ಸ್ಟೈಲಲ್ಲಿ ಶತಕ ಸಂಭ್ರಮಾಚರಣೆ ಮಾಡಿದ ರೋಹಿತ್ ಶರ್ಮಾ!
ಮುಂಬೈ , ಸೋಮವಾರ, 29 ಅಕ್ಟೋಬರ್ 2018 (17:28 IST)
ಮುಂಬೈ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಏಕದಿನ ಪಂದ್ಯಗಳಲ್ಲಿ ಅತೀ ಹೆಚ್ಚು ಸಿಕ್ಸರ್ ಗಳಿಸಿದ ಎರಡನೇ ಭಾರತೀಯ ಆಟಗಾರ ಎಂಬ ದಾಖಲೆ ಮಾಡಿದ್ದಾರೆ.

ದ್ವಿತೀಯ ಸ್ಥಾನದಲ್ಲಿದ್ದ ಸಚಿನ್ ತೆಂಡುಲ್ಕರ್ (195) ದಾಖಲೆ ಮುರಿದ ರೋಹಿತ್ ತಮ್ಮ ಸಿಕ್ಸರ್ ಗಳ ಸಂಖ್ಯೆಯನ್ನು 196 ಕ್ಕೇರಿಸಿದ್ದಾರೆ. ಮೊದಲ ಸ್ಥಾನದಲ್ಲಿ 211 ಸಿಕ್ಸರ್ ಗಳೊಂದಿಗೆ ಎಂಎಸ್ ಧೋನಿ ಇದ್ದಾರೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 50 ಓವರ್ ಗಳಲ್ಲಿ5  ವಿಕೆಟ್ ನಷ್ಟಕ್ಕೆ 377 ರನ್ ಗಳಿಸಿ ವಿಂಡೀಸ್ ಗೆಲುವಿಗೆ ಬೃಹತ್ ಗುರಿ ನೀಡಿದೆ. ನಿಧಾನವಾಗಿ ಇನಿಂಗ್ಸ್ ಆರಂಭಿಸಿದ ಭಾರತ ನಂತರ ರೋಹಿತ್ ಭರ್ಜರಿ ಬ್ಯಾಟಿಂಗ್ ನಿಂದ ಲಯ ಕಂಡುಕೊಂಡಿತು. ಒಟ್ಟು 137 ಎಸೆತ ಎದುರಿಸಿದ ರೋಹಿತ್ 4 ಸಿಕ್ಸರ್, 20 ಬೌಂಡರಿಗಳ ನೆರವಿನಿಂದ ಬರೋಬ್ಬರಿ 162 ರನ್ ಸಿಡಿಸಿದರು. ವಿಶೇಷವೆಂದರೆ ಕೂಲ್ ಆಗಿಯೇ ಇರುವ ರೋಹಿತ್ ಇಂದು ಶತಕ ಸಿಡಿಸಿದ ಮೇಲೆ ಪಕ್ಕಾ ವಿರಾಟ್ ಕೊಹ್ಲಿಯಂತೇ ಮೇಲಕ್ಕೆ ಜಿಗಿದು ಶತಕ ಸಂಭ್ರಮಾಚರಣೆ ಮಾಡಿದರು. ರೋಹಿತ್ ಶತಕ ಸಂಭ್ರಮಾಚರಣೆ ಮಾಡುತ್ತಿದ್ದರೆ ಗ್ಯಾಲರಿಯಲ್ಲಿ ಕೂತಿದ್ದ ಪತ್ನಿ ರಿತಿಕಾ ಎದ್ದು ನಿಂತು ಚಪ್ಪಾಳೆ ತಟ್ಟುತ್ತಿದ್ದರು!

ಸತತ ಮೂರು ಶತಕ ಗಳಿಸಿದ್ದ ಕೊಹ್ಲಿ ಈ ಪಂದ್ಯದಲ್ಲಿ ಬೇಗನೇ ಔಟಾಗುವ (16) ಮೂಲಕ  ನಿರಾಸೆ ಮೂಡಿಸಿದರು. ಶಿಖರ್ ಧವನ್ 38 ರನ್ ಗಳಿಸಿದರು. ಆದರೆ ಮೂರನೇ ವಿಕೆಟ್ ಗೆ ರೋಹಿತ್ ಜತೆ ಉತ್ತಮ ಜತೆಯಾಟವಾಡಿದ ಅಂಬುಟಿ ರಾಯುಡು ಭರ್ತಿ 100 ರನ್ ಗಳಿಸಿ ಔಟಾದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಐತಿಹಾಸಿಕ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ