Publish Date: Tue, 30 Oct 2018 (09:18 IST)
Updated Date: Tue, 30 Oct 2018 (09:20 IST)
ಮುಂಬೈ: ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾದಿಂದ ಕೈಬಿಡುವ ಬಗ್ಗೆ ಆಯ್ಕೆಗಾರರು ಧೋನಿ ಬಳಿ ಹೇಳಿದಾಗ ಅವರ ಪ್ರತಿಕ್ರಿಯೆ ಏನಿತ್ತು ಗೊತ್ತಾ?
ಇನ್ನೊಬ್ಬ ವಿಕೆಟ್ ಕೀಪರ್ ನ್ನು ಮುಂಬರುವ ವಿಶ್ವಕಪ್ ದೃಷ್ಟಿಯಿಂದ ತಯಾರು ಮಾಡಲು ಧೋನಿಯನ್ನು ಕೈ ಬಿಟ್ಟಿರುವುದಾಗಿ ಈಗಾಗಲೇ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಸ್ಪಷ್ಟಪಡಿಸಿದ್ದರು.
ಈ ಬಗ್ಗೆ ಅವರು ಧೋನಿ ಬಳಿ ಮೊದಲೇ ಚರ್ಚಿಸಿದ್ದರಂತೆ. ತಂಡದ ಆಯ್ಕೆ ಮಾಡುವ ಮೊದಲು ನಿಮ್ಮನ್ನು ಈ ಕಾರಣಕ್ಕೆ ತಂಡದಿಂದ ಕೈ ಬಿಡಲಾಗುತ್ತಿದೆ ಎಂದಿದ್ದಕ್ಕೆ ಧೋನಿ ಸಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿದರು. ಅವರು ಇದು ಒಂದು ಉತ್ತಮ ಐಡಿಯಾ. ಹಾಗೇ ಮಾಡಿ ಎಂದಿದ್ದರಂತೆ! ಹಾಗಂತ ಪ್ರಸಾದ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.