2019 ರ ವಿಶ್ವಕಪ್ ಆಡುವಾಗ ವಿರಾಟ್ ಕೊಹ್ಲಿಗೆ ಧೋನಿ ಬೇಕೇ ಬೇಕು!

ಗುರುವಾರ, 1 ನವೆಂಬರ್ 2018 (09:08 IST)
ಮುಂಬೈ: ಟೀಂ ಇಂಡಿಯಾದಲ್ಲಿ ಸದ್ಯಕ್ಕೆ ಧೋನಿ ವೃತ್ತಿ ಬದುಕಿನ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಫಾರ್ಮ್ ಕಳೆದುಕೊಂಡಿರುವ ಹಿರಿಯ ಕ್ರಿಕೆಟಿಗ ನಿವೃತ್ತಿಯಾಗುವುದು ಒಳ್ಳೆಯದು ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಧೋನಿ ವಿಶ್ವಕಪ್ ವರೆಗಾದರೂ ಇರಲೇ ಬೇಕು ಎಂದಿದ್ದಾರೆ.

ಯಾರಿಗೆ ಬೇಕೋ ಬೇಡವೋ, ಆದರೆ ವಿರಾಟ್ ಕೊಹ್ಲಿಗೆ ಧೋನಿ ಮುಂದಿನ ವಿಶ್ವಕಪ್ ವರೆಗೆ ಆಡುವುದು ಅಗತ್ಯವಾಗಿದೆ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

‘ವಿರಾಟ್ ಗೆ ಧೋನಿ ಬೇಕು. 50 ಓವರ್ ಗಳ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಬೌಲರ್ ಗಳ ಜತೆ ಹಿಂದಿಯಲ್ಲಿ ಮಾತನಾಡುತ್ತಾ, ಎಲ್ಲಿ, ಹೇಗೆ ಬಾಲ್ ಎಸೆಯಬೇಕು, ಹೇಗೆ ಫೀಲ್ಡ್ ಸೆಟ್ ಮಾಡಬೇಕು ಎಂದು ಸಲಹೆ ಕೊಡಲು, ಒತ್ತಡದ ಪರಿಸ್ಥಿತಿ ನಿಭಾಯಿಸಲು ವಿರಾಟ್ ಗೆ ಧೋನಿ ಬೇಕೇ ಬೇಕು’ ಎಂದು ಗವಾಸ್ಕರ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಭಾರತ-ವಿಂಡೀಸ್ ಅಂತಿಮ ಏಕದಿನ ಇಂದು: ದಾಖಲೆ ಮಾಡಲು ಧೋನಿಗೆ ಬೇಕು ಒಂಟಿ ರನ್