Publish Date: Fri, 02 Nov 2018 (08:55 IST)
Updated Date: Fri, 02 Nov 2018 (08:56 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ ಸಾಗುವುದನ್ನು ನೋಡಿ ಅವರನ್ನು ಎಲ್ಲರೂ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಗೆ ಹೋಲಿಸುತ್ತಿದ್ದಾರೆ.
ಆದರೆ ಈ ಬಗ್ಗೆ ಸ್ವತಃ ಸಚಿನ್ ಹೇಳಿದ್ದೇನು ಗೊತ್ತಾ? ಇತ್ತೀಚೆಗಷ್ಟೇ ಏಕದಿನ ಪಂದ್ಯಗಳಲ್ಲಿ ಅತೀ ವೇಗದ 10 ಸಾವಿರ ರನ್ ಗಳಿಸಿದ ತಮ್ಮ ದಾಖಲೆ ಮುರಿದಿದ್ದ ವಿರಾಟ್ ರನ್ನು ತಮಗೆ ಹೋಲಿಸುವವರಿಗೆ ಸಚಿನ್ ಒಂದು ಮಾತು ಹೇಳಿದ್ದಾರೆ.
‘ವಿರಾಟ್ ಸದ್ಯಕ್ಕೆ ಲೀಡಿಂಗ್ ಕ್ರಿಕೆಟರ್ ಎನ್ನುವುದು ನನಗೆ ಗೊತ್ತು. ಆತ ಒಬ್ಬ ಆಟಗಾರನಾಗಿ ಅಸಾಮಾನ್ಯವಾಗಿ ಬೆಳವಣಿಗೆ ಹೊಂದಿದ್ದಾನೆ. ಆತನಲ್ಲೊಂದು ಮಿಂಚು ನೋಡಿದ್ದೇನೆ. ಆತ ಮುಂದೊಂದು ದಿನ ವಿಶ್ವದ ದಿಗ್ಗಜ ಕ್ರಿಕೆಟಿಗ ಆಗುತ್ತಾನೆ ಎಂದು ನನಗೆ ಗೊತ್ತು. ಆದರೆ ಹೋಲಿಕೆಗಳಲ್ಲಿ ನನಗೆ ನಂಬಿಕೆಯಿಲ್ಲ. ನಾವು ಆಡುತ್ತಿದ್ದ ಕಾಲವೇ ಬೇರೆ ಇತ್ತು. ಆಗಿನ ಬೌಲರ್ ಗಳೇ ಬೇರೆಯವರಾಗಿದ್ದರು. ಈಗಿನ ಕಾಲವೇ ಬೇರೆ. ಹೀಗಾಗಿ ಹೋಲಿಕೆ ಮಾಡಿ ಯಾರು ಶ್ರೇಷ್ಠ ಎಂದು ಅಳೆದು ತೂಗುವುದರಲ್ಲಿ ಅರ್ಥವಿಲ್ಲ’ ಎಂದು ಸಚಿನ್ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.