Publish Date: Tue, 27 Nov 2018 (09:04 IST)
Updated Date: Tue, 27 Nov 2018 (09:05 IST)
ನವದೆಹಲಿ: ತಮ್ಮ ತಂದೆಯ ಬಗ್ಗೆ ಮಾಹಿತಿ ಇಲ್ಲ ಎಂದು ಕಾಂಗ್ರೆಸ್ ನಾಯಕರೊಬ್ಬರು ಲೇವಡಿ ಮಾಡಿದ್ದಕ್ಕೆ ಪ್ರಧಾನಿ ಮೋದಿ ಕೆಂಡಾಮಂಡಲರಾಗಿ ಪ್ರತಿಕ್ರಿಯಿಸಿದ್ದಾರೆ.
ರಾಹುಲ್ ಗಾಂಧಿ ಐದು ತಲೆಮಾರುಗಳ ಬಗ್ಗೆ ಇಡೀ ವಿಶ್ವಕ್ಕೇ ಗೊತ್ತು. ಆದರೆ ಪ್ರಧಾನಿ ಮೋದಿ ತಂದೆ ಬಗ್ಗೆ ಯಾರಿಗಾದರೂ ಗೊತ್ತಾ ಎಂದು ಇತ್ತೀಚೆಗೆ ಕಾಂಗ್ರೆಸ್ ನಾಯಕ ವಿಲಾಸ್ ಮುತ್ತೇಮ್ವಾರ್ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ ‘ನನ್ನ ಕುಟುಂಬಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ. ಹಾಗಿರುವಾಗ ನನ್ನ ತೀರಿಕೊಂಡ ಅಪ್ಪನನ್ನು ಯಾಕೆ ರಾಜಕೀಯಕ್ಕೆ ಕರೆರುತ್ತೀರಿ’ ಎಂದು ಕಿಡಿ ಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.