Publish Date: Mon, 26 Nov 2018 (17:00 IST)
Updated Date: Mon, 26 Nov 2018 (17:12 IST)
ನಟ ಹಾಗೂ ಕೇಂದ್ರ ಮಾಜಿ ಸಚಿವ ಅಂಬರೀಶ್ ನಿಧನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೂರು ದಿನಗಳು ಶೋಕಾಚರಣೆ ಜಾರಿಯಲ್ಲಿದೆ. ಈ ನಡುವೆ ಬಿಜೆಪಿ ಶಾಸಕರೊಬ್ಬರು ಸಂಭ್ರಮಾಚರಣೆ ಮಾಡಿಕೊಳ್ಳುತ್ತಿದ್ದಾರೆ.
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರವೀಂದ್ರನಾಥ ಜನ್ಮದಿನಾಚರಣೆಯನ್ನು ಸಡಗರದಿಂದ ಆಚರಿಸಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ ಇದೆ. ಈ ಮಧ್ಯ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ಬಿಜೆಪಿ ಶಾಸಕರ ನಡೆ ಸಾರ್ವಜನಿಕರ ಟೀಕೆಗೆ ಗುರಿಯಾಗುತ್ತಿದೆ.
ಹುಟ್ಟುರು ಶಿರಮಗೊಂಡನಹಳ್ಳಿಯಲ್ಲಿ 73 ನೇ ಹುಟ್ಟುಹಬ್ಬ ಆಚರಿಸಿಕೊಂಡ ಶಾಸಕ ರವೀಂದ್ರನಾಥ್ ಗೆ ಶುಭವನ್ನು ಸರ್ಕಾರಿ ಅಧಿಕಾರಿಗಳು, ಪಕ್ಷದ ಮುಖಂಡರು ಹಾಗೂ ಆಪ್ತರು ಕೋರಿದ್ದಾರೆ. ಹುಟ್ಟುಹಬ್ಬಕ್ಕೆ ಭೂರಿ ಭೋಜನ ಸಿದ್ಧಪಡಿಸಲಾಗಿತ್ತು.