Publish Date: Sat, 17 Nov 2018 (18:34 IST)
Updated Date: Sat, 17 Nov 2018 (18:36 IST)
ಮುಜರಾಯಿ ಇಲಾಖೆ ಅನುದಾನ ಹಿಂಪಡೆಯಲು ಬಿಜೆಪಿ ಶಾಸಕ ಮನವಿ ಮಾಡಿಕೊಂಡು ಸಚಿವರಿಗೆ ಪತ್ರ ಬರೆದಿದ್ದಾರೆ.
ಹೊಸದುರ್ಗ ಶಾಸಕ ಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದು, ಬಂದ ಅನುದಾನ ವಾಪಸ್ಸು ಪಡೆಯುವಂತೆ ಪತ್ರ ಬರೆದಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಪತ್ರ ಬರೆದಿದ್ದು, ದೇಗುಲ ಅಭಿವೃದ್ಧಿಗೆ 8ಲಕ್ಷ ರೂ. ಬಿಡುಗಡೆ ಮಾಡಿರುವ ಮುಜರಾಯಿ ಇಲಾಖೆ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಜರಾಯಿ ಇಲಾಖೆ ಸಚಿವ ರಾಜಶೇಖರ ಬಿ. ಪಾಟೀಲ್ ಅವರಿಗೆ ಪತ್ರ ಬರೆದ ಶಾಸಕ ಶೇಖರ್, ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ.
ಕೇವಲ 8 ಲಕ್ಷ ರೂ. ಅನುದಾನವನ್ನು ಮಂಜೂರು ಮಾಡಿದ್ದಕ್ಕೆ ಗೂಳಿಹಟ್ಟಿ ಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಅನುದಾನ ನಮ್ಮ ತಾಲೂಕಿಗೆ ಬಹಳ ದೊಡ್ಡದಾಯಿತು. ಸಿಎಂ ಅಥವಾ ಮುಜರಾಯಿ ಸಚಿವರ ಕ್ಷೇತ್ರದಲ್ಲಿ ಈ ಅನುದಾನ ಬಳಕೆ ಮಾಡಿಕೊಳ್ಳಿ. ನಾನು ಬಂದು ಹಣ್ಣು ಕಾಯಿ ತಂದು ಪೂಜೆ ಮಾಡಿಸಿ ದೇವರ ಆಶೀರ್ವಾದ ಪಡೆಯುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ ಎನ್ನಲಾಗಿದೆ.
ಹಳೇಕುಂದೂರು ಗ್ರಾಮದ ಆಂಜನೇಯ ಸ್ವಾಮಿ ದೇಗುಲಕ್ಕೆ ಮಂಜೂರಾಗಿದ್ದ ಅನುದಾನವನ್ನು ಹಿಂಪಡೆದುಕೊಳ್ಳುವಂತೆ ಪತ್ರ ಬರೆದಿದ್ದಾರೆ.