Select Your Language

Notifications

webdunia
webdunia
webdunia
webdunia

ಮರಳಿಗಾಗಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ವಿರುದ್ಧ ದಂಗೆ ಏಳಿ ಎಂದ ಬಿಜೆಪಿ ಶಾಸಕ!

ಮರಳಿಗಾಗಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ವಿರುದ್ಧ ದಂಗೆ ಏಳಿ ಎಂದ ಬಿಜೆಪಿ ಶಾಸಕ!
ದಾವಣಗೆರೆ , ಭಾನುವಾರ, 11 ನವೆಂಬರ್ 2018 (18:19 IST)
ಸಿಎಂ ಎಚ್.ಡಿ.ಕುಮಾರಸ್ವಾಮಿ ಹಿಂದೊಮ್ಮೆ ಸಾರ್ವಜನಿಕರಿಗೆ ದಂಗೆಗೆ ಕರೆ ನೀಡಿ ಚರ್ಚೆಗೆ ಗ್ರಾಸವಾಗಿದ್ರು. ಈಗ ಬಿಜೆಪಿಯ ಶಾಸಕರೊಬ್ಬರು ಜನರಿಗೆ ದಂಗೆ ಏಳೋದಕ್ಕೆ ಕರೆ ನೀಡಿದ್ದಾರೆ. ಅವ್ರು ಕರೆ ನೀಡಿರೋದು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ವಿರುದ್ಧ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ರಾಜಕಾರಣಕ್ಕೂ ಮರಳಿಗೂ ಅವಿನಾಭಾವ ಸಂಬಂಧ. ಯಾವತ್ತಿಗೂ ಒಂದನ್ನೊಂದು ಬಿಟ್ಟಿರುವುದಿಲ್ಲ. ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಆಗಿನ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಹಾಲಿ ಶಾಸಕರಾಗಿದ್ದ ಡಿ.ಜಿ.ಶಾಂತನಗೌಡ ಅಕ್ರಮ ಮರಳು ಗಣಿಗಾರಿಕೆ ವಿಚಾರವಾಗಿ ಆರೋಪ-ಪ್ರತ್ಯಾರೋಪ ಮಾಡಿಕೊಂಡು ಅದನ್ನೇ ಅಸ್ತ್ರ ಮಾಡಿಕೊಂಡು ಚನಾವಣೆ ಎದುರಿಸಿದ್ದರು. ಎಂ.ಪಿ.ರೇಣುಕಾಚಾರ್ಯ ಚುನಾವಣೆಯಲ್ಲಿ ಗೆದ್ದರೆ ಜನ ಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಮರಳು ವಿತರಣೆ ಮಾಡುವ ಆಶ್ವಾಸನೆ ನೀಡಿದ್ದರು.

ಅದರಂತೆ ಚುನಾವಣೆಯಲ್ಲಿ ಗೆದ್ದ ಎಂ.ಪಿ.ರೇಣುಕಾಚಾರ್ಯ ಶಾಸಕರಾಗಿ ಆರು ತಿಂಗಳಾದ್ರು ಜನರಿಗೆ ಮರಳು ಕೊಡಿಸಲು ಆಗುತ್ತಿಲ್ಲ. ಶೌಚಾಲಯ, ಮನೆ, ದೇವಸ್ಥಾನ ನಿರ್ಮಾಣಕ್ಕೆ ಮರಳು ಸಿಗುತ್ತಿಲ್ಲ. ಪೊಲೀಸರು ಅಮಾಯಕರ ಮೇಲೆ ದೂರು ದಾಖಲಿಸಿ ಜೈಲಿಗೆ ಕಳುಹಿಸುತ್ತಿದ್ದಾರೆ. ಬಡವರಿಗೆ ಮರಳು ನೀಡುವಲ್ಲಿ ಜಿಲ್ಲಾಡಳಿ ವಿಫಲವಾಗಿದೆ. ಹಾಗಾಗಿ ಜನ ದಂಗೆ ಎದ್ದೇಳಬೇಕು ಅಂತ ರೇಣುಕಾಚಾರ್ಯ, ಡಿ.ಜಿ.ಶಾಂತನಗೌಡರು ಶಾಸಕರಾಗಿದ್ದಾಗ ಬಡವರಿಗೆ ಮರಳು ಕೊಡಿಸುತ್ತಿದ್ದೇನೆ ಎಂದು ದಂಡು ದಂಡು ಅಧಿಕಾರಿಗಳನ್ನು ಮಾಧ್ಯಮವರನ್ನು ಕರೆದುಕೊಂಡು ಮರಳು ಬ್ಲಾಕ್ ಗಳಿಗೆ ಹೋಗಿ ತಾವು ಪ್ರಮಾಣಿಕ ಶಾಸಕ ಅಂತ ಪ್ರೂವ್ ಮಾಡಿಕೊಂಡಿದ್ದರು.

ಅಂದು ಎಂ.ಪಿ.ರೇಣುಕಾಚಾರ್ಯ ಶಾಸಕರ ವಿರುದ್ಧ ನೇರವಾಗಿ ಆರೋಪ ಮಾಡಿದ್ರು. ಆದರೆ, ಇಂದು ರೇಣುಕಾಚಾರ್ಯ ಹೊನ್ನಾಳಿ ತಾಲೂಕಿನಲ್ಲಿ ಮರಳು ಅಕ್ರಮ ಸಾಗಣೆ ಆಗ್ತಿದೆ. ಟೆಂಡರ್ ದಾರರು ರಿಂಗ್ ಮಾಡಿಕೊಂಡು ಸಾಮಾನ್ಯ ಜನರನ್ನು ಕಷ್ಟಕ್ಕೆ ತಳ್ಳುತ್ತಿದ್ದಾರೆ. ತಾಲೂಕು ಆಡಳಿತ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಮೈನಿಂಗ್ ಇಲಾಖೆ ಅಧಿಕಾರಿಗಳು ಅವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ತಾಲೂಕಿನ ಜನತೆಗೆ ಮರಳು ಕೊಡಿಸಲು ನಾನು ಜೈಲಿಗೆ ಹೋದ್ರೂ ಪರವಾಗಿಲ್ಲ.

ತಾಲೂಕಿನ ಜನತೆಗೆ ಕರೆ ನೀಡುತ್ತಿದ್ದೇನೆ ನವೆಂಬರ್ 12 ರಂದು ಎಲ್ರೂ ತಮ್ಮ ತಮ್ಮ ಟ್ರ್ಯಾಕ್ಟರ್, ಎತ್ತಿನ ಗಾಡಿ ತೆಗೆದುಕೊಂಡು ಬನ್ನಿ ನಾನು ಮುಂದೆ ನಿಂತು ನದಿಯಿಂದ ಮರಳು ತೆಗೆಸುತ್ತೇನೆ. ತಾಕತ್ ಇದ್ರೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ನನ್ನನ್ನು ತಡೆಯಲಿ ಎಂದು ಸವಾಲ್ ಹಾಕಿದ್ದಾರೆ. ಇನ್ನೂ ಇತ್ತ ರೇಣುಕಾಚಾರ್ಯ ಗೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ಖಡಕ್ ಎಚ್ಚರಿಕೆ ನೀಡಿದ್ದು, ರೇಣುಕಾಚಾರ್ಯ ಆಕಾಶದಿಂದ ಇಳಿದು ಬಂದಿಲ್ಲ. ಯಾರೇ ಆಗಲಿ ಕಾನೂನು ಮೀರಿದರೆ ಕಠಿಣ ಕ್ರಮಕ್ಕೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಪರಪ್ಪನ ಅಗ್ರಹಾರ ಜೈಲು ಸೇರಿದ ಜನಾರ್ಧನ ರೆಡ್ಡಿ: ಸಿದ್ದರಾಮಯ್ಯ ಪ್ರತಿಕ್ರಿಯೆ ಏನು ಗೊತ್ತಾ?