Select Your Language

Notifications

webdunia
webdunia
webdunia
webdunia

ರಾತ್ರೋರಾತ್ರಿ ಬಿಜೆಪಿ ಶಾಸಕರು ಪ್ರತಿಭಟನೆ ಮಾಡಿದ್ಯಾಕೆ?

ರಾತ್ರೋರಾತ್ರಿ ಬಿಜೆಪಿ ಶಾಸಕರು ಪ್ರತಿಭಟನೆ ಮಾಡಿದ್ಯಾಕೆ?
ಬೆಳಗಾವಿ , ಭಾನುವಾರ, 11 ನವೆಂಬರ್ 2018 (14:39 IST)
ರಾತ್ರೋರಾತ್ರಿ ಬಿಜೆಪಿ ಶಾಸಕರು ಪೊಲೀಸ್ ಕಮೀಷನರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಬೆಳಗಾವಿಯಲ್ಲಿ ರಾತ್ರೋರಾತ್ರಿ ಬಿಜೆಪಿ ಶಾಸಕರ ಪ್ರತಿಭಟನೆ ನಡೆದಿದೆ. ಕೋಲ್ಡ್ ಸ್ಟೋರೇಜನಿಂದ ಮಾಂಸ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಧರಣಿ ನಡೆದಿದೆ. ದಿಢೀರ್ ಆಗಿ ಬಿಜೆಪಿ ಇಬ್ಬರು ಶಾಸಕರಿಂದ ಪ್ರತಿಭಟನೆ ನಡೆಯಿತು.
ಬೆಳಗಾವಿ ಪೊಲೀಸ್ ಕಮೀಷನರ್ ಕಚೇರಿ ಎದುರು ಧರಣಿಯನ್ನು ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ ನಡೆಸಿದರು.
ಪೊಲೀಸ್ ಪ್ರೊಟೆಕ್ಷನ್ ಅಲ್ಲಿ ಬೀಪ್ ಮಾಂಸ ಸಾಗಾಟಕ್ಕೆ ವಿರೋಧ ವ್ಯಕ್ತಪಡಿಸಿದರು. ಬೆಳಗಾವಿಯ ಆಟೋ ನಗರದಲ್ಲಿನ ಕೋಲ್ಡ್ ಸ್ಟೋರೇಜನಿಂದ ಸಾಗಾಟವಾಗಿದೆ ಎಂದು ಆರೋಪ ಕೇಳಿಬಂದಿದೆ.

ಎರಡು ಗಂಟೆಗಳ ಕಾಲ ಬಿಜೆಪಿ ಶಾಸಕರಿಂದ ಪ್ರತಿಭಟನೆ ನಡೆಯಿತು. ಪೊಲೀಸ್ ಆಯುಕ್ತ ರಾಜಪ್ಪ ವಿರುದ್ಧ ಕೆಂಡಾಕಾರಿದ ಶಾಸಕರು. ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ದೂರಿದರು.

ಇದೇ 13 ರಂದು ಬೆಳಗಾವಿಗೆ ಹೋಮ್ ಮಿನಿಸ್ಟರ್ ಬರ್ತಿದ್ದಾರೆ. ಅವತ್ತು ಬೆಳಗಾವಿ ಬಂದ್ ಮಾಡಿ, ಕಪ್ಪು ಬಟ್ಟೆ ತೋರಿಸಿ ವಿರೋಧಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ಶಾಸಕ ಅಭಯ ಪಾಟೀಲ ಕಿಡಿಕಾರಿದರು.

ಎಸಿಪಿ ಎನ್‌.ವಿ.ಬರಮನಿ ಅವರಿಂದ ಶಾಸಕರ ಮನವೊಲಿಕೆ ಕಾರ್ಯ ನಡೆಯಿತು. ಆ ಬಳಿಕ ಶಾಸಕರು ಪ್ರತಿಭಟನೆ ಕೈಬಿಟ್ಟರು.




Share this Story:

Follow Webdunia kannada

ಮುಂದಿನ ಸುದ್ದಿ

ಉರುಸ್ ಸಡಗರದಿಂದ ಆಚರಣೆ