Select Your Language

Notifications

webdunia
webdunia
webdunia
webdunia

ಭೂ ವಿಸ್ತರಣೆ ಯೋಜನೆ ವಿರುದ್ಧ ಪ್ರತಿಭಟನೆ

ಭೂ ವಿಸ್ತರಣೆ ಯೋಜನೆ ವಿರುದ್ಧ ಪ್ರತಿಭಟನೆ
ಮಂಗಳೂರು , ಸೋಮವಾರ, 5 ನವೆಂಬರ್ 2018 (18:27 IST)
ಎಂಆರ್ ಪಿಎಲ್ ಕಂಪನಿಯ ಭೂ ವಿಸ್ತರಣಾ ಯೋಜನೆಯನ್ನು ತಡೆ ಹಿಡಿಯಬೇಕೆಂದು ಆಗ್ರಹಿಸಿ ಕರಾವಳಿ ಕರ್ನಾಟಕ ಜನ ವಿರೋಧಿ ವೇದಿಕೆ ಪ್ರತಿಭಟನೆ ನಡೆಸಿತು.

ರೈತ ಸಂಘಗಳ ಒಕ್ಕೂಟ ಮತ್ತು ಎಂಆರ್ ಪಿಎಲ್ ಆಸುಪಾಸಿನ ನಿವಾಸಿಗಳಿಂದ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ಈ ಪ್ರತಿಭಟನೆಯನ್ನ ಹಮ್ಮಿಕೊಳ್ಳಲಾಗಿತ್ತು.

ಎಂಆರ್ ಪಿಎಲ್ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಮತ್ತು ವಿಸ್ತರಣಾ ಯೋಜನೆಗೆ ನೀಡಿದ ಒಪ್ಪಿಗೆಯನ್ನ ಹಿಂಪಡೆಯಬೇಕು. ಈ ಬೃಹತ್ ರಾಸಾಯನಿಕ ಸ್ಥಾವರದಿಂದ ಆಗಬಹುದಾದ ಅನಾಹುತಗಳಿಂದ ಲಕ್ಷಾಂತರ ನಾಗರಿಕರ ಜೀವನಕ್ಕೆ ಧಕ್ಕೆಯಾಗಲಿದೆ.

ಅಲ್ಲದೇ ಕರಾವಳಿಯ ಸೂಕ್ಷ್ಮ ಪರಿಸರಕ್ಕೆ ಹಾಗೂ ಕೃಷಿ ಮತ್ತು ಮತ್ಸೋದ್ಯಮಕ್ಕೆ ಹಾನಿಯುಂಟು ಮಾಡಲಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

 

Share this Story:

Follow Webdunia kannada

ಮುಂದಿನ ಸುದ್ದಿ

ದರೋಡೆ ಪ್ರಕರಣದ ಇಬ್ಬರು ಆರೋಪಿಗಳ ಸಹಿತ 1.75 ಕೋಟಿ ವಶ