Publish Date: Sun, 04 Nov 2018 (16:50 IST)
Updated Date: Sun, 04 Nov 2018 (16:52 IST)
ನವೆಂಬರ್ ತಿಂಗಳಿನಲ್ಲಿ ಮಾಲ್ ಗಳಲ್ಲಿ ಹಿಂದಿ ಸಿನಿಮಾ ಹಾಕಿದ ಹಿನ್ನೆಲೆ ದಾವಣಗೆರೆಯ ಶಾಮನೂರು ರಸ್ತೆಯಲ್ಲಿರುವ ಎಸ್ ಎಸ್ ಮಾಲ್ ಮುಂಭಾಗ ಕನ್ನಡ ಪರ ಸಂಘಟನೆ ಒಕ್ಕೂಟದಿಂದ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಪುತ್ರ ಗಣೇಶ್ ಒಡತನಕ್ಕೆ ಸೇರಿದ ಎಸ್ ಎಸ್ ಮಾಲ್ ಇದಾಗಿದ್ದು, ಇಲ್ಲಿರುವ ಮೂವೀ ಟೈಮ್ಸ್ ನಲ್ಲಿ ಹಿಂದಿ ಚಿತ್ರ ಪ್ರದರ್ಶನವಾಗುತ್ತಿತ್ತು. ಈ ಮೊದಲೇ ಸಂಘಟನೆಗಳು ನವೆಂಬರ್ ತಿಂಗಳು ಸಂಪೂರ್ಣವಾಗಿ ಕನ್ನಡ ಚಿತ್ರ ಪ್ರದರ್ಶನ ಮಾಡಬೇಕು ಎಂದು ಮನವಿ ಮಾಡಿದ್ದವು. ಆದರೂ ಸಹ ಹಿಂದಿ ಸಿನಿಮಾ ಪ್ರದರ್ಶನ ಮಾಡಿದ ಹಿನ್ನಲೆ ವೇದಿಕೆಗಳ ಒಕ್ಕೂಟ ಪ್ರತಿಭಟನೆ ನಡೆಸಿತು.
ಪ್ರತಿಭಟನೆಗೆ ಮಣಿದು ಮೂವಿ ಟೈಮ್ ವ್ಯವಸ್ಥಾಪಕ ಹಿಂದಿ ಸಿನಿಮಾ ಪ್ರದರ್ಶನ ರದ್ದುಗೊಳಿಸಿ, ಇನ್ನೂ ಮುಂದೆ ಕನ್ನಡ ಸಿನಿಮಾಗಳನ್ನು ಪ್ರದರ್ಶಿಶನ ಮಾಡುತ್ತೇವೆ ಎಂದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.