ನೋಟು ಅಮಾನ್ಯಕ್ಕೆ 2 ವರ್ಷ: ಕಾಂಗ್ರೆಸ್ ಖಂಡನೆ

ಶುಕ್ರವಾರ, 9 ನವೆಂಬರ್ 2018 (18:50 IST)
ನೋಟು ಅಮಾನ್ಯಗೊಳಿಸಿದಕ್ಕೆ ಎರಡು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಕ್ರಮದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ.

ನೋಟ್ ಬ್ಯಾನ್ ವಿರೋಧಿಸಿ ವಿಜಯಪುರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಗಾಂಧಿ ಪ್ರತಿಮೆ ಬಳಿ ಸೇರಿದ್ದ ಕಾಂಗ್ರೆಸ್  ಕಾರ್ಯಕರ್ತರು ಹಾಗೂ ಪ್ರಮುಖರು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ನೋಟು ಅಮಾನ್ಯಕರಣದಿಂದಾಗಿ ಬಡವರು ಹಾಗೂ ಮಧ್ಯಮವರ್ಗದವರಿಗೆ ಅಲ್ಲದೇ ಸಣ್ಣಪುಟ್ಟ ವ್ಯಾಪಾರಿಗಳಿಗೆ ತೊಂದರೆ ಬಹಳಷ್ಟಾಗಿದೆ. ದೇಶದ ಆರ್ಥಿಕತೆ ಮೇಲೆ ನೋಟು ಅಮಾನ್ಯಕರಣ ಪರಿಣಾಮ ಬೀರಿದೆ ಎಂದು ಪ್ರತಿಭಟನಾಕಾರರು ದೂರಿದರು.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸರಕಾರಿ ಜಾಗದಲ್ಲಿ ತಲೆಎತ್ತುತ್ತಿರುವ ಧಾರ್ಮಿಕ ಕೇಂದ್ರಗಳು