Publish Date: Sun, 11 Nov 2018 (14:29 IST)
Updated Date: Sun, 11 Nov 2018 (14:31 IST)
ರಾಮಸಮುದ್ರದಲ್ಲಿ "ಹಜರತ್ ಸೈಯದ್ ದಿಲ್ಬರ್ ದಿಲ್ಬಕ್ಷಾ ಖಾದರ್ ವಲಿ" ದರ್ಗಾದಲ್ಲಿ ಹಲವಾರು ಪವಾಡಗಳೊಂದಿಗೆ ಗಂಧದ ಉರುಸ್ ಅದ್ದೂರಿಯಾಗಿ ಜರುಗಿತು.
ಚಾಮರಾಜನಗರ ಪಟ್ಟಣದ ರಾಮಸಮುದ್ರದಲ್ಲಿ "ಹಜರತ್ ಸೈಯದ್ ದಿಲ್ಬರ್ ದಿಲ್ಬಕ್ಷಾ ಖಾದರ್ ವಲಿ" ದರ್ಗಾದಲ್ಲಿ ಹಲವಾರು ಪವಾಡಗಳೊಂದಿಗೆ ಗಂಧದ ಉರುಸ್ ಅದ್ದೂರಿಯಾಗಿ ಜರುಗಿತು.
ದರ್ಗಾ ಆಡಳಿತ ಮಂಡಳಿಯಿಂದ ಪ್ರತಿ ವರ್ಷ ದಂತೆ ಈ ಬಾರಿಯೂ ಗಂಧದ ಉರುಸ್ ಆಚರಣೆ ಮಾಡಲಾಯಿತು. ಚಾಮರಾಜನಗರದಲ್ಲಿ ನಡೆದ ಉರುಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾವಿರಾರು ಭಕ್ತಾದಿಗಳು ಹಜರತ್ ರವರ ಕೃಪೆಗೆ ಪಾತ್ರರಾದರು.
ಹಜರತ್ ರವರ ಅನುಯಾಯಿಗಳು ವಿವಿಧ ರೀತಿಯ ಪಾವಡಗಳನ್ನ ಪ್ರದರ್ಶಿಸಿ ಜನರ ಗಮನ ಸೆಳೆದರು. ಇಲ್ಲಿಗೆ ಆಗಮಿಸಿದ್ದ ಭಕ್ತರಿಗೆ ಊಟ ಹಾಗೂ ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.
ತಮ್ಮ ಇಷ್ಟಾರ್ಥ ಈಡೇರಿಸುವಂತೆ ಹರಕೆ ಹೊತ್ತ ಭಕ್ತರು, ದರ್ಗಾಕ್ಕೆ ಗಂಧ ಹಚ್ಚಿ ಛಾದರ್ ಸಮರ್ಪಿಸಿದರು. ಕವ್ವಾಲಿಯೊಂದಿಗೆ ಅದ್ದೂರಿಯಾಗಿ ನಡೆದ ಗಂಧದ ಮೆರವಣಿಗೆ ಜನಮನ ಸೂರೆಗೊಂಡಿತು.