ಪ್ರಧಾನಿ ಮೋದಿ ಹೇಳಿದ್ದ ಹೇಳಿಕೆಯನ್ನು ಉಲ್ಲೇಖಿಸಿ 'ಹಿಂದೂ- ಮುಸ್ಲಿಮರು ದ್ವೇಷ ಸಾಧಿಸುವುದನ್ನು ಬಿಡಬೇಕೆಂದು ಪ್ರಧಾನಿ ಹೇಳತ್ತಾರೆ. ಸತ್ಯ ಸಂಗತಿ ಏನೆಂದರೆ ಅವರು ಪರಷ್ಪರ ಬಡಿದಾಡುವುದಿಲ್ಲ. ಅವರನ್ನು ಬಡಿದಾಡುವಂತೆ ಮಾಡಲಾಗುತ್ತದೆ', ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವ್ಯಂಗ್ಯವಾಡಿದ್ದಾರೆ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದು, ವಾಸ್ತವವಾಗಿ ದೇಶದ ಹಿಂದೂ ಮುಸ್ಲಿಮರು ಪರಷ್ಪರ ಕಚ್ಚಾಡುತ್ತಿಲ್ಲ, ಅವರನ್ನು ಕಚ್ಚಾಡುವಂತೆ ಮಾಡಲಾಗುತ್ತದೆ ಎಂದು ಗುಡುಗಿದ್ದಾರೆ.
ಹಿಂದೂಗಳು ಮತ್ತು ಮುಸ್ಲಿಮರು ಪರಷ್ಪರ ಹೊಡೆದಾಡುವುದನ್ನು ಬಿಟ್ಟು ಅಭಿವೃದ್ಧಿಗಾಗಿ ಕೆಲಸ ಮಾಡಬೇಕೆಂದು ಪ್ರಧಾನಿ ಹೇಳಿದ್ದರು.
12 ನಿಮಿಷಗಳ ಭಾಷಣದಲ್ಲಿ ಕಾಂಗ್ರೆಸ್ ವರಿಷ್ಠ ಕೋಮುವಾದಿ ರಾಜಕಾರಣ ನಡೆಸುತ್ತಿದ್ದಾರೆ ಎಂದು ಆರೋಪಿಸಿ ವಿರೋಧ ಪಕ್ಷದ ಮೇಲೆ ವಾಗ್ದಾಳಿ ನಡೆಸಿದರು. ಕೋಮುವಾದಿ ರಾಜಕಾರಣ ನಿಂತರೆ ಕೆಲವರು ತಮ್ಮ ವ್ಯಾಪಾರವನ್ನು ನಿಲ್ಲಿಸಬೇಕಾಗುತ್ತದೆ ಎಂದು ಅವರು ಅಣಕವಾಡಿದರು.
ಬಿಹಾರ್ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸುವುದರ ಮೂಲಕ ಪ್ರಧಾನಿ ರಾಜ್ಯದ ಜನತೆಗೆ ಅಪಮಾನ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.