Publish Date: Thu, 26 Oct 2023 (17:30 IST)
Updated Date: Thu, 26 Oct 2023 (17:12 IST)
ಮಾಜಿ ಸಿಎಂ ಹೆಚ್.ಡಿ.ಕೆ ವಿಧಾನಸಭೆಯಲ್ಲಿ ಚರ್ಚೆ ನಡೆಸುವ ಸವಾಲು ವಿಚಾರವಾಗಿ ಡಿಸಿಎಂ ಡಿಕೆಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ಅಸೆಂಬ್ಲಿ ಎಲ್ಲಿ ನಡೆಯುತ್ತೆ ಅವರೇ ತೀರ್ಮಾನ ಮಾಡಲಿ.ಬಹಳ ಸಂತೋಷ.ಅಸೆಂಬ್ಲಿಯಲ್ಲಿ ಎಲ್ಲಾ ಮಾಧ್ಯಮಕ್ಕೂ ಅವಕಾಶ ಸಿಗಲಿದೆ.ಅವರ ಹತ್ರ ಇರೋ ಎಲ್ಲಾ ಸರಕು ಅಸೆಂಬ್ಲಿಗೆ ತರಲಿ.ಅವರ ಎಲ್ಲಾ ಸರಕಿಗೆ ನಾನೂ ಉತ್ತರ ತರ್ತೀನಿ.ನಾನು ಏನು ಮಾತಾಡಬೇಕು ಎಲ್ಲಾ ಹೇಳ್ತೀನಿ.ಅವರು ಸವಾಲು ಸ್ವೀಕಾರ ಮಾಡಿರೋದಕ್ಕೆ ಸಂತೋಷ.ಹಿಂದೆ ಕೂಡ ನಿಗದಿ ಮಾಡಿದ್ರು, ಉತ್ತರ ಕೊಟ್ಟಿದ್ದೆ.ಬಂದು ಕ್ಷಮೆ ಕೇಳಿದ್ದು ನಿಮಗೆ ಗೊತ್ತಿದೆ ಎಂದು ಹೆಚ್‌ಡಿ ಕುಮಾರಸ್ವಾಮಿಗೆ ಡಿಕೆಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.