Select Your Language

Notifications

webdunia
webdunia
webdunia
webdunia

ಪ್ರಿಯಾಂಕಾ ಗಾಂಧಿ ಮಹೋನ್ನತ ನಾಯಕಿ

ಪ್ರಿಯಾಂಕಾ ಗಾಂಧಿ ಮಹೋನ್ನತ ನಾಯಕಿ
, ಶನಿವಾರ, 28 ಅಕ್ಟೋಬರ್ 2023 (11:08 IST)
ರಾಹುಲ್ ಬದಲು ಪ್ರಿಯಾಂಕಾ ಅವರಿಗೆ ಪಕ್ಷದ ಜವಾಬ್ದಾರಿ ಹೊರಿಸುವಂತೆ ಕಾಂಗ್ರೆಸ್ ಪಕ್ಷದ ಒಳಗಡೆಯೇ ಆಗಾಗ ಒತ್ತಾಯಗಳು ಕೇಳಿ ಬರುತ್ತಿರುತ್ತದೆ. ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನೇ ಹೋಲುವುದು ಸಹ ಇದಕ್ಕೆ ಕಾರಣವಿರಬಹುದು. ಈಗ ಸ್ವತಃ ಇಂದಿರಾ ಗಾಂಧಿಯವರು ಸಹ ಇದೇ ಬಯಕೆಯನ್ನು ಹೊಂದಿದ್ದರು ಎಂಬ ಸಂಗತಿ ಈಗ ಬೆಳಕಿಗೆ ಬಂದಿದೆ.  ಮೊಮ್ಮಗಳು ಪ್ರಿಯಾಂಕಾ ತಮ್ಮ ಉತ್ತರಾಧಿಕಾರಿಯಾಗಬೇಕೆಂದು ಬಯಸಿದ್ದರು ಎಂದು ಅವರ ವಿಶ್ವಸನೀಯ ಸಲಹೆಗಾರರಾಗಿದ್ದ ಹಿರಿಯ ಕಾಂಗ್ರೆಸಿಗ ಎಂ ಎಲ್‌ ಫೋತೆದಾರ್‌ ಹೇಳಿದ್ದಾರೆ.
 
ಪ್ರಿಯಾಂಕಾರವರಲ್ಲಿ ತಮ್ಮ ಪ್ರತಿಬಿಂಬವನ್ನು ಕಂಡಿದ್ದ ಇಂದಿರಾರವರು ಭವಿಷ್ಯದಲ್ಲಿ ಪ್ರಿಯಾಂಕಾ ಮಹೋನ್ನತ ನಾಯಕಿಯಾಗುತ್ತಾಳೆ ಎಂಬ ಭರವಸೆಯನ್ನು ವ್ಯಕ್ತ ಪಡಿಸಿದ್ದರು ಎಂದು ಪೋತೇದಾರ್ ತಿಳಿಸಿದ್ದಾರೆ. 
 
 ಇಂದಿರಾ ಗಾಂಧಿ ಹತ್ಯೆಯಾಗುವುದಕ್ಕೆ ಕೇವಲ ಮೂರು ದಿನಗಳ ಮೊದಲು. ಆಗ ನಾವು ಕಾಶ್ಮೀರದಲ್ಲಿದ್ದೆವು. ಅಲ್ಲಿ ದೇವಸ್ಥಾನವೊಂದನ್ನು ಸಂದರ್ಶಿಸಿ ದಿಲ್ಲಿಗೆ ಹೊರಡುವ ಮುನ್ನ ನಾವೆಲ್ಲ ಕೊಂಚ ಕಾಲ ಅಲ್ಲೇ ಕುಳಿತುಕೊಂಡು ವಿಶ್ರಾಂತಿ ಪಡೆದುಕೊಂಡೆವು. ಆಗಲೇ ಅವರು ನನ್ನ ಜತೆ ಪ್ರಿಯಾಂಕಾ ಬಗ್ಗೆ ಹೇಳಿಕೊಂಡಿದ್ದರು", ಎಂದು ಫೋತೆದಾರ್‌ ಹೇಳಿದ್ದಾರೆ.
 
"ಬಹುಶಃ ತಮ್ಮ ಸಾವು ಸನ್ನಿಹಿತವಾಗಿದೆ ಎಂದು ಅವರಿಗೆ ಅನ್ನಿಸಿರಬೇಕು, ಹೀಗಾಗಿ ಪ್ರಿಯಾಂಕಾ ನಾಯಕಿಯಾಗಬೇಕೆಂಬ ತಮ್ಮ  ಬಯಕೆಯನ್ನು ಅವರು ಹೇಳಿಕೊಳ್ಳಲು ಬಯಸಿರಬೇಕು. ಅವರ ಮಾತುಗಳು ಬಹಳ ಮಹತ್ವದೆಂದು ನನಗನ್ನಿಸಿತು. ಅವರು ಹೇಳಿದ್ದನ್ನೆಲ್ಲ ಅಂದು ರಾತ್ರಿಯೇ ನಾನು ಬರೆದಿಟ್ಟಿದ್ದೆ", ಎಂದು ಅವರು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. 
 
ಪ್ರಿಯಾಂಕಾರಲ್ಲಿ ತಮ್ಮನ್ನು ಕಾಣುತ್ತಿದ್ದ ಇಂದಿರಾ ವ್ಯಕ್ತಿತ್ವವನ್ನು ಅಳೆಯುವಲ್ಲಿ ಬಹಳ ಚಾಣಾಕ್ಷರಾಗಿದ್ದರು ಎಂದು ಇಂದಿರಾರವರನ್ನು ಹತ್ತಿರದಿಂದ ಕಂಡ ಅವರ ಆಪ್ತ ಫೋತೆದಾರ್‌  ಹೇಳಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿ