Publish Date: Fri, 27 Oct 2023 (13:20 IST)
Updated Date: Fri, 27 Oct 2023 (12:38 IST)
ಲೋಕಸಭೆ ಚುನಾವಣೆಗೂ ಮುನ್ನ ಸೆಮಿಫೈನಲ್ ಎಂತಲೇ ಬಿಂಬಿತವಾಗಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಶತಾಯ ಗತಾಯ ಗೆಲುವು ಪಡೆಯಬೇಕೆಂದು ಕಾಂಗ್ರೆಸ್ ಹವಣಿಸುತ್ತಿದ್ದು, ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದ ರೀತಿಯ ಗ್ಯಾರಂಟಿಗಳ ಘೋಷಣೆ ಮಾಡಿದೆ. ₹500ಕ್ಕೆ ಸಿಲಿಂಡರ್ ಹಾಗೂ ಮನೆ ಒಡತಿಗೆ ವಾರ್ಷಿಕ ₹10 ಸಾವಿರ ನೀಡುವ ಘೋಷಣೆ ಮಾಡಲಾಗಿದೆ.