Select Your Language

Notifications

webdunia
webdunia
webdunia
webdunia

ಮಾದರಿ ವ್ಯಕ್ತಿಯಾಗಲು ಮೋಹನ್ ಭಾಗವತ್ ಕರೆ

mohan bagwat
, ಶನಿವಾರ, 28 ಅಕ್ಟೋಬರ್ 2023 (12:59 IST)
ವೈಯಕ್ತಿಯ ಬದುಕಿನಲ್ಲಿ ಯಶಸ್ಸು ಕಂಡ ವ್ಯಕ್ತಿ ಮೌಲ್ಯಗಳನ್ನು ಸಹ ಮೈಗೂಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಿರಬೇಕು, ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವರಿಷ್ಠರಾದ ಮೋಹನ್ ಭಾಗವತ್ ಹೇಳಿದ್ದಾರೆ. ತಮ್ಮ ನೈತಿಕ ಮೌಲ್ಯಗಳ ಜತೆ ರಾಜಿ ಮಾಡಿಕೊಳ್ಳದೆ ಸಾಧಿಸುವವರು ಸಮಾಜಕ್ಕೆ ಆದರ್ಶ ಪ್ರಾಯರಾಗಿರುತ್ತಾರೆ ಎಂದು ಭಾಗ್ವತ್ ತಿಳಿಸಿದ್ದಾರೆ.

ಮೂತ್ರಶಾಸ್ತ್ರಜ್ಞ ಅಜಿತ್ ಫಡ್ಕೆ  ಜೀವನವನ್ನಾಧರಿಸಿದ 'ಅ್ಯನ್ ಅಮೇಜಿಂಗ್ ಗ್ರೇಸ್', ಎಂಬ ಪುಸತ್ಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. 
 
ಯಶಸ್ಸು ಮತ್ತು ಮೌಲ್ಯಗಳು ಜತೆಗೆ ಸಾಗಬೇಕು. ಇದು ಸಹ ದೇಶಭಕ್ತಿಯ ಒಂದು ರೂಪ. ನೀವು ನಿಮ್ಮ ಕ್ಷೇತ್ರದಲ್ಲಿ ಸಾಧಿಸಿದ್ದರಷ್ಟೇ ಸಾಲದು, ನಿಮಗೆ ನೀವು ಪ್ರಾಮಾಣಿಕರಾಗಿರಬೇಕು.ಇದು ರಾಷ್ಟ್ರಕ್ಕೆ ಸೇವೆ ಸಲ್ಲಿಸಿದಂತೆ," ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. 
 
ಪ್ರಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್ಸ್ಟೈನ್ ಅವರನ್ನು ಉಲ್ಲೇಖಿಸಿ ಮಾತನಾಡಿದ ಅವರು, 'ಯಶಸ್ವಿ ಪುರುಷನಾಗಲು ಪ್ರಯತ್ನಿಸುವುದಕ್ಕಿಂತ  ಮೌಲ್ಯಗಳುಳ್ಳ ವ್ಯಕ್ತಿಯಾಗಲು ಪ್ರಯತ್ನಿಸಿ', ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಾಂಕಾ ಗಾಂಧಿ ಮಹೋನ್ನತ ನಾಯಕಿ