ಮುಂಬೈ : ಕೊರೊನಾ ವೈರಸ್ ಭೀತಿಯಿಂದ ಹೊರ ಬಂದಿರುವ ಜನರು ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧವಾಗುತ್ತಿದ್ದಾರೆ.
ಆದರೆ ಈ ನಡುವೆ ಅಮೆರಿಕದಲ್ಲಿ ಹೆಚ್ಚು ಸೋಂಕು ಹರಡಲು ಕಾರಣವಾಗಿದ್ದ ಓಮಿಕ್ರಾನ್ ಉಪತಳಿ
BQ.1 ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದೆ.
ಪುಣೆ ಮೂಲದ ವ್ಯಕ್ತಿಯೊಬ್ಬರ ಕೊರೊನಾ ಸ್ಯಾಂಪಲ್ನ ಜೀನೋಮ್ ಪರೀಕ್ಷೆ ವೇಳೆ ಈ ಹೊಸ ಓಮಿಕ್ರಾನ್ ಉಪತಳಿ ಪತ್ತೆಯಾಗಿದೆ. ಈ ಬಗ್ಗೆ ರಾಜ್ಯ ಕಣ್ಗಾವಲು ಅಧಿಕಾರಿ ಪ್ರದೀಪ್ ಅವಟೆ ಮಾಹಿತಿ ನೀಡಿದ್ದು, ಹಬ್ಬದ ದಿನಗಳಲ್ಲಿ ಜನರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
BQ.1 ಮತ್ತು BQ.1.1 ಓಮಿಕ್ರಾನ್ನ BA.5 ಉಪತಳಿಗಳಾಗಿವೆ. ಈ ಎರಡು ತಳಿಗಳು ಅಪಾಯಕಾರಿ ಎಂದು ವಿವರಿಸಲಾಗಿದೆ. ವ್ಯಾಕ್ಸಿನ್ ಶಕ್ತಿಯನ್ನು ಮೀರಿ ಹರಡುವ ಶಕ್ತಿ ಹೊಂದಿರುವ ಈ ತಳಿಗಳು ಅಮೆರಿಕದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ 10% ಕ್ಕಿಂತ ಹೆಚ್ಚಿನ ಪ್ರಮಾಣವನ್ನು ಹೊಂದಿದೆ.