Publish Date: Sun, 09 Oct 2022 (12:52 IST)
Updated Date: Sun, 09 Oct 2022 (13:56 IST)
ಲಕ್ನೋ : ಉತ್ತರ ಪ್ರದೇಶದ ರಸ್ತೆಗಳನ್ನು 2024ರ ಒಳಗಾಗಿ ಅಮೆರಿಕದ ರಸ್ತೆಗಳಿಗಿಂತಲೂ ಉತ್ತಮವಾಗಿಸುತ್ತೇವೆ ಎಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ವಾಗ್ದಾನ ಮಾಡಿದ್ದಾರೆ.
ಉತ್ತರ ಪ್ರದೇಶದ ರಸ್ತೆ ಯೋಜನೆಗಳಿಗೆ ಉತ್ತೇಜನ ನೀಡಲು 8,000 ರೂ. ಪ್ಯಾಕೇಜ್ ಅನ್ನು ಘೋಷಿಸಿದ ನಿತಿನ್ ಗಡ್ಕರಿ, 2024ರ ಒಳಗಾಗಿ ಉತ್ತರ ಪ್ರದೇಶದ ರಸ್ತೆಗಳನ್ನು ಅಮೆರಿಕಗಿಂತ ಉತ್ತಮವಾಗಿ ಮಾಡಬೇಕು.
ಇದಕ್ಕಾಗಿ ಮೋದಿ ಸರ್ಕಾರ ಮುಂದಿನ ದಿನಗಳಲ್ಲಿ ಉತ್ತರ ಪ್ರದೇಶಕ್ಕಾಗಿ 5 ಲಕ್ಷ ಕೋಟಿ ರೂ. ಅನುಮೋದನೆ ನೀಡಲು ಹೊರಟಿದೆ ಎಂದು ತಿಳಿಸಿದರು.