Select Your Language

Notifications

webdunia
webdunia
webdunia
webdunia

ಆನ್ಲೈನ್ ಗೇಮ್ಸ್ ಬ್ಯಾನ್ : ಶೀಘ್ರದಲ್ಲಿ ಸರ್ಕಾರದಿಂದ ಆದೇಶ

ಆನ್ಲೈನ್ ಗೇಮ್ಸ್ ಬ್ಯಾನ್ : ಶೀಘ್ರದಲ್ಲಿ ಸರ್ಕಾರದಿಂದ ಆದೇಶ
ಚೆನೈ , ಶನಿವಾರ, 8 ಅಕ್ಟೋಬರ್ 2022 (14:44 IST)
ಚೆನೈ : ಹಣಕಾಸಿನ ಹಕ್ಕು ಹೊಂದಿರುವ ಆನ್ಲೈನ್ ಗೇಮ್ಗಳನ್ನು (ಆನ್ಲೈನ್ ಜೂಜು ಆಟಗಳು) ನಿಷೇಧಿಸಲು ತಮಿಳುನಾಡು ಸರ್ಕಾರ ಚಿಂತಿಸಿದೆ.
 
ರಾಜ್ಯದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆ ಇಂತಹದ್ದೊಂದು ಮಹತ್ವದ ನಿರ್ಧಾರ ಶೀಘ್ರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈ ಆನ್ಲೈನ್ ಗೇಮ್ಗಳಿಂದ ಪ್ರಸುತ್ತ ವರ್ಷದಲ್ಲಿ ರಾಜ್ಯದಲ್ಲಿ ಆರು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಿಂದ ಎಚ್ಚೆತ್ತುಕೊಂಡ ಸರ್ಕಾರ, ಆನ್ಲೈನ್ ರಮ್ಮಿ ಮತ್ತು ಪೋಕರ್ ಆಟಗಳನ್ನು ಎರಡು ವಾರಗಳವರೆಗೆ ನಿಷೇಧಿಸುವ ಸುಗ್ರೀವಾಜ್ಞೆ ಹೊರಡಿಸಿತ್ತು. ಇದಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಇದರ ಬೆನ್ನಲ್ಲೇ ಶಾಶ್ವತವಾಗಿ ನಿಷೇಧ ಮಾಡುವ ಬಗ್ಗೆ ಚಿಂತನೆ ಆರಂಭಗೊಂಡಿದೆ. 

ಇತ್ತೀಚೆಗೆ ಚೆನೈ ನಿವಾಸಿ ಭವಾನಿ (29) ಆನ್ಲೈನ್ ರಮ್ಮಿ ಗೀಳಿಗೆ ಬಿದ್ದು ಹಣಕಾಸಿನ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರ ಬಳಿಕ ರಾಜ್ಯ ಸರ್ಕಾರವು ಆನ್ಲೈನ್ ಆಟಗಳ ಪರಿಣಾಮಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಿತು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತೀಯ ವಾಯುಪಡೆಯಲ್ಲಿ ಮಹಿಳಾ ಅಗ್ನಿವೀರ್ ನೇಮಕಾತಿ