ನವದೆಹಲಿ : ನೆರೆಯ ಪಾಕಿಸ್ತಾನಕ್ಕೆ ಅಮೆರಿಕ ನೀಡುತ್ತಿರುವ ಎಫ್-16 ಪ್ಯಾಕೇಜ್ ಬಗ್ಗೆ ಭಾರತ ಪ್ರಶ್ನೆ ಎತ್ತಿದೆ.
ಅಮೆರಿಕ ನೀಡುತ್ತಿರುವ ಪ್ಯಾಕೇಜ್ಗೆ ಪಾಕಿಸ್ತಾನ ಯೋಗ್ಯವಾಗಿದೆಯೇ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಪ್ರಶ್ನಿಸಿದ್ದಾರೆ.
ಭಾನುವಾರ ವಾಷಿಂಗ್ಟನ್ನಲ್ಲಿ ಭಾರತ-ಅಮೆರಿಕ ಸಮುದಾಯ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಜೈಶಂಕರ್, ಇದು ಪಾಕಿಸ್ತಾನಕ್ಕೆ ಉತ್ತಮ ಸೇವೆ ಸಲ್ಲಿಸುವುದರಿಂದ ಅಥವಾ ಅಮೆರಿಕದ ಹಿತಾಸಕ್ತಿಗಳಿಗೆ ಗೌರವ ನೀಡುವುದರಿಂದ ಸಂಬಂಧಗಳು ಗಟ್ಟಿಯಾಗುವುದಿಲ್ಲ ಎಂದು ಟಾಂಗ್ ನೀಡಿದರು.
ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರ ಸ್ಥಳವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಅಮೆರಿಕದಿಂದ ಎಫ್-16 ನಂತಹ ಶಕ್ತಿಶಾಲಿ ವಿಮಾನಗಳನ್ನು ಪಡೆಯುತ್ತಿರುವ ಪಾಕಿಸ್ತಾನದ ಹಿಂದಿನ ಉದ್ದೇಶವನ್ನೂ ನಾವು ಊಹಿಸಬಲ್ಲೆವು.
ನೀವು ಈ ವಿಷಯಗಳ ಬಗ್ಗೆ ಏನೇ ಸ್ಪಷ್ಟನೆ ನೀಡಿದರೂ ಯಾರನ್ನೂ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಜೈಶಂಕರ್ ಖಡಕ್ ಆಗಿ ತಿರುಗೇಟು ನೀಡಿದ್ದಾರೆ.