Select Your Language

Notifications

webdunia
webdunia
webdunia
webdunia

ವಿಮಾನ ನಿಲ್ದಾಣದಲ್ಲಿ ಪಾಕ್ ಹಣಕಾಸು ಸಚಿವನಿಗೆ ನಿಂದನೆ?

ವಿಮಾನ ನಿಲ್ದಾಣದಲ್ಲಿ ಪಾಕ್ ಹಣಕಾಸು ಸಚಿವನಿಗೆ ನಿಂದನೆ?
ವಾಷಿಂಗ್ಟನ್ , ಶನಿವಾರ, 15 ಅಕ್ಟೋಬರ್ 2022 (07:41 IST)
ವಾಷಿಂಗ್ಟನ್ : ಪಾಕಿಸ್ತಾನದ ನೂತನ ಹಣಕಾಸು ಸಚಿವರಾಗಿ ಅಧಿಕಾರ ಸ್ವೀಕರಿಸಿದ ಇಶಾಕ್ ದಾರ್ ಅವರು ಅಮೆರಿಕಗೆ ಭೇಟಿ ನೀಡಿದ್ದ ಸಂದರ್ಭ ಕೆಲ ಅಪರಿಚಿತ ವ್ಯಕ್ತಿಗಳು ಅವರಿಗೆ ಸುಳ್ಳುಗಾರ, ಕಳ್ಳ ಎಂದು ನಿಂದಿಸಿರುವ ಘಟನೆ ನಡೆದಿದೆ.

ಇದರಿಂದ ಸಚಿವರು ಕೂಡಾ ಕಿಡಿಯಾಗಿದ್ದಾರೆ. ಜಾಗತಿಕ ಸಾಲ ನೀಡುವ ಸಂಸ್ಥೆಗಳೊಂದಿಗೆ ಸಭೆಗಳಲ್ಲಿ ಭಾಗವಹಿಸಲು ಹಾಗೂ ನಗದು ಕೊರತೆ ಮತ್ತು ಪ್ರವಾಹ ಪೀಡಿತ ಪಾಕಿಸ್ತಾನಕ್ಕೆ ಹೆಚ್ಚು ಅಗತ್ಯವಿರುವ ನೆರವು ಪಡೆಯಲು ಇಶಾಕ್ ದಾರ್ ಅವರು ವಾಷಿಂಗ್ಟನ್ ತೆರಳಿದ್ದರು.

ಈ ವೇಳೆ ವಿಮಾನ ನಿಲ್ದಾಣದಲ್ಲಿ ಅವರಿಗೆ ಅವಾಚ್ಯವಾಗಿ ನಿಂದಿಸಿದ ಘಟನೆ ನಡೆದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಜಾನುವಾರುಗಳಿಗೆ ಚರ್ಮಗಂಟು ರೋಗ ತಡೆಯುವ ಕುರಿತು ಸಭೆ ನಡೆಸಿದ ಸಿಎಂ