Select Your Language

Notifications

webdunia
webdunia
webdunia
webdunia

ಭಾರತಕ್ಕೆ ಹೋಗುವುದು ಅಪಾಯಕಾರಿ ಎಂದ ಅಮೆರಿಕಾ

ಭಾರತಕ್ಕೆ ಹೋಗುವುದು ಅಪಾಯಕಾರಿ ಎಂದ ಅಮೆರಿಕಾ
ಬೆಂಗಳೂರು , ಶನಿವಾರ, 8 ಅಕ್ಟೋಬರ್ 2022 (15:04 IST)
ಅಪರಾಧ ಮತ್ತು ಭಯೋತ್ಪಾದನೆ ಪ್ರಮಾಣ ಹೆಚ್ಚಾಗಿರುವುದರಿಂದ ಭಾರತಕ್ಕೆ ಹೋಗುವುದು ಅಪಾಯಕಾರಿ ಎಂದು ತಮ್ಮ ದೇಶದ ಪ್ರವಾಸಿಗರಿಗೆ ಅಮೆರಿಕ ಎಚ್ಚರಿಕೆ ನೀಡಿದೆ.
 
ಇತ್ತೀಚೆಗಷ್ಟೇ ಕೆನಡಾ ದೇಶ ಭಾರತದ ಈ ರಾಜ್ಯಗಳಿಗೆ ಭೇಟಿ ನೀಡುವುದು ಅಪಾಯಕಾರಿ.
ಜಮ್ಮು ಕಾಶ್ಮೀರ, ಈಶಾನ್ಯ ರಾಜ್ಯಗಳು, ಗುಜರಾತ್, ದೆಹಲಿ ಸೇರಿದಂತೆ ಹಲವು ರಾಜ್ಯಗಳನ್ನು ಉದಾಹರಿಸಿತ್ತು.
 
ಇದೀಗ ಜಗತ್ತಿನ ದೊಡ್ಡಣ್ಣ ಎಂದೇ ಹೆಸರಾದ ಅಮೆರಿಕ ಕೂಡ ಭಾರತಕ್ಕೆ ಭೇಟಿ ನೀಡುವುದು ಅಪಾಯಕಾರಿಯಾಗಿದೆ. ಅದರಲ್ಲೂ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಕಾಶ್ಮೀರದ ಭೇಟಿ ನೀಡಬೇಡಿ ಎಂದು ಹೇಳಿದೆ.
 
ದೇಶದ ಪ್ರವಾಸಿಗರಿಗೆ ನೀಡಿದ ಎಚ್ಚರಿಕೆ ಪ್ರಮಾಣ 2ನೇ ಹಂತದ್ದಾಗಿದೆ. 4ನೇ ಹಂತದ್ದಾಗಿದ್ದರೆ ಗರಿಷ್ಠ ಅಪಾಯ ಎಂಬುದಾಗಿದೆ. ಹಿಂದಿನ ದಿನವಷ್ಟೇ ಪಾಕಿಸ್ತಾನಕ್ಕೆ ಭೇಟಿ ನೀಡುವುದು ಮೂರನೇ ಹಂತದ ಅಪಾಯ ಎಂದು ಮುನ್ನೆಚ್ಚರಿಕೆ ನೀಡಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಆನ್ಲೈನ್ ಗೇಮ್ಸ್ ಬ್ಯಾನ್ : ಶೀಘ್ರದಲ್ಲಿ ಸರ್ಕಾರದಿಂದ ಆದೇಶ