Publish Date: Mon, 31 Aug 2020 (10:06 IST)
Updated Date: Mon, 31 Aug 2020 (10:08 IST)
ನವದೆಹಲಿ: ಭ್ರಷ್ಟ, ಸರಿಯಾಗಿ ಕೆಲಸ ಮಾಡದ ಸರಕಾರಿ ಅಧಿಕಾರಿಗಳು ಇನ್ನು ಹಾಯಾಗಿರುವಂತಿಲ್ಲ. ಇಂತಹ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ಶಿಕ್ಷೆ ನೀಡಲು ಕೇಂದ್ರ ನಿರ್ಧರಿಸಿದೆ.
ಮೋದಿ ಸರ್ಕಾರದ ಮತ್ತೊಂದು ಮಹತ್ವದ ನಿರ್ಧಾರ ಇದಾಗಲಿದೆ. ಅಧಿಕಾರಿಗಳ ಟ್ರ್ಯಾಕ್ ರೆಕಾರ್ಡ್ ನೋಡಿಕೊಂಡು ಸರಿಯಾಗಿ ಕಾರ್ಯನಿರ್ವಹಣೆ ಮಾಡದ, ಲಂಚಕೋರ, ಭ್ರಷ್ಟ ಅಧಿಕಾರಿಗಳನ್ನು ಪತ್ತೆ ಹಚ್ಚಿ ಅಂತಹವರಿಗೆ ಅವಧಿ ಪೂರ್ಣ ನಿವೃತ್ತಿ ನೀಡಲು ಕೇಂದ್ರ ನಿರ್ಧಾರ ಮಾಡಿದೆ. ಈಗಾಗಲೇ ಆಯಾ ಇಲಾಖೆಗೆ ಸೂಚನೆ ನೀಡಿರುವ ಕೇಂದ್ರ ಅಂತಹ ಅಧಿಕಾರಿಗಳನ್ನು ಪತ್ತೆ ಹಚ್ಚಲು ಸೂಚಿಸಿದೆ. ಈ ಮೂಲಕ ಸರ್ಕಾರಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸ ಮಾಡಿದೆ.