ನವದೆಹಲಿ: ಗಲ್ವಾನ್ ವ್ಯಾಲಿಯಲ್ಲಿ ಘರ್ಷಣೆಯಾಗಿದ್ದ ವೇಳೆ ಕೇವಲ ಭೂ ಸೇನೆ ಮಾತ್ರ ಚೀನಾಕ್ಕೆ ತಿರುಗೇಟು ನೀಡಿರಲಿಲ್ಲ. ಸಮುದ್ರ ಮಾರ್ಗದಲ್ಲೂ ಯುದ್ಧ ನೌಕೆಗಳನ್ನು ನಿಯೋಜಿಸಿ ಎಚ್ಚರಿಕೆ ನೀಡಿತ್ತು ಎಂಬ ಅಂಶ ಈಗ ಬೆಳಕಿಗೆ ಬಂದಿದೆ.
ಭಾರತ ಸಮುದ್ರ ಮಾರ್ಗದಲ್ಲಿ ಯುದ್ಧ ನೌಕೆಗಳನ್ನು ನಿಯೋಜಿಸಿದ್ದು ಚೀನಾಕ್ಕೆ ತಲೆನೋವಾಗಿತ್ತು. ಇದಕ್ಕೆ ರಾಜತಾಂತ್ರಿಕವಾಗಿಯೂ ವಿರೋಧ ವ್ಯಕ್ತಪಡಿಸಿತ್ತು. ಆದರೆ ಭಾರತ ಇದಕ್ಕೆ ಸೊಪ್ಪು ಹಾಕಿರಲಿಲ್ಲ. ಈ ಸಂದರ್ಭದಲ್ಲಿ ಅಮೆರಿಕಾದ ಯುದ್ಧ ನೌಕೆಗಳೂ ಭಾರತಕ್ಕೆ ಸಾಥ್ ನೀಡಿದ್ದವು. ಇದು ಚೀನಾವನ್ನು ಬೆಚ್ಚಿಬೀಳಿಸಿತ್ತು. ಈಗಲೂ ದಕ್ಷಿಣ ಚೀನಾ ಸಮುದ್ರದಲ್ಲಿ ಭಾರತದ ಯುದ್ಧ ನೌಕೆಗಳು ಚೀನಾ ಹಡಗುಗಳ ಮೇಲೆ ಹದ್ದಿನಗಣ್ಣಿಟ್ಟಿದೆ ಎನ್ನಲಾಗಿದೆ.