Select Your Language

Notifications

webdunia
webdunia
webdunia
webdunia

ಕೊವಿಡ್ ವ್ಯಾಕ್ಸಿನ್ ತಯಾರಿಸಿರುವ ರಷ್ಯಾಗೆ ಈಗ ಭಾರತದ ಮೇಲೆ ಕಣ್ಣು

ಕೊವಿಡ್ ವ್ಯಾಕ್ಸಿನ್ ತಯಾರಿಸಿರುವ ರಷ್ಯಾಗೆ ಈಗ ಭಾರತದ ಮೇಲೆ ಕಣ್ಣು
ನವದೆಹಲಿ , ಸೋಮವಾರ, 24 ಆಗಸ್ಟ್ 2020 (09:49 IST)
ನವದೆಹಲಿ: ಎಂತಹದ್ದೇ ಉತ್ಪನ್ನವಿರಲಿ, ಜಗತ್ತಿನ ಅತೀ ದೊಡ್ಡ ಮಾರುಕಟ್ಟೆ ಎಂದರೆ ಅದರಲ್ಲಿ ಭಾರತದ ಹೆಸರು ಮುಂಚೂಣಿಯಲ್ಲಿರುತ್ತದೆ. ಇದೇ ಕಾರಣಕ್ಕೆ ವಿದೇಶೀ ಕಂಪನಿಗಳು ನಮ್ಮ ದೇಶದಲ್ಲಿ ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಹುಡುಕುತ್ತಲೇ ಇರುತ್ತಾರೆ.


ಇದೀಗ ರಷ್ಯಾ ತಾನು ನಿರ್ಮಿಸಿರುವ ಕೊವಿಡ್ 19 ವ್ಯಾಕ್ಸಿನ್ ತಯಾರಿಕೆಗೂ ಭಾರತದಲ್ಲಿ ಮಾರುಕಟ್ಟೆ ಹುಡುಕುತ್ತಿದೆ. ರಷ್ಯಾ ತಯಾರಿಸಿರುವ ಸ್ಪುಟ್ನಿಕ್ ವಿ ವ್ಯಾಕ್ಸಿನ್ ಬಗ್ಗೆ ಹಲವು ಅನುಮಾಗಳಿವೆ. ಆದರೆ ಅದು ಯಾವುದಕ್ಕೂ ತಲೆಕೆಡಿಸಿಕೊಳ್ಳದ  ಆ ರಾಷ್ಟ್ರ ತಾನು ಉತ್ಪಾದಿಸಿರುವ ವ್ಯಾಕ್ಸಿನ್ ನ್ನು ಭಾರತದಲ್ಲೇ ತಯಾರಿಸಿ ಇಲ್ಲಿ ಜನಪ್ರಿಯತೆ ಪಡೆಯಲು ಹವಣಿಸುತ್ತಿದೆ.

ಆದರೆ ಭಾರತ ಈಗಾಗಲೇ ತನ್ನದೇ ವ್ಯಾಕ್ಸಿನ್ ತಯಾರಿಕೆಯಲ್ಲಿ ತೊಡಗಿದ್ದು ಅಂತಿಮ ಹಂತದಲ್ಲಿದೆ. ಹೀಗಾಗಿ ಸದ್ಯಕ್ಕೆ ರಷ್ಯಾ ವ್ಯಾಕ್ಸಿನ್ ಗೆ ಭಾರತದಲ್ಲಿ ಒಪ್ಪಿಗೆ ಸಿಗುವುದು ಕಷ್ಟವೇ.

Share this Story:

Follow Webdunia kannada

ಮುಂದಿನ ಸುದ್ದಿ

ಊಟದ ಬಳಿಕ ಇದನ್ನು ತಿಂದರೆ ನಂಜಿನಾಂಶ ಸಮಸ್ಯೆ ಕಾಡಲ್ಲ