ಲಕ್ನೋ: ಕೊರೋನಾದಿಂದ ಬಳಲುತ್ತಿದ್ದ ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್ ಇತ್ತೀಚೆಗೆ ಕಿಡ್ನಿ ವೈಫಲ್ಯದಿಂದಾಗಿ ಸಾವನ್ನಪ್ಪಿದ್ದರು. ಆದರೆ ಅವರ ಸಾವಿಗೆ ಮೂಲ ಕಾರಣ ಕೊರೋನಾ ಅಲ್ಲ ಎಂದು ಸಮಾಜವಾದಿ ಪಕ್ಷದ ಎಂಎಲ್ ಸಿ ಸುನಿಲ್ ಸಿಂಗ್ ಸಾಜನ್ ಆರೋಪಿಸಿದ್ದಾರೆ.
ಸಾಜನ್ ಕೂಡಾ ಅದೇ ಆಸ್ಪತ್ರೆಯಲ್ಲಿ ಕೊರೋನಾಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂಬುದು ಗಮನಾರ್ಹ. ಮೊದಲು ಚೌಹಾಣ್ ಗೆ ಹರ್ಯಾಣ ಸರ್ಕಾರದ ಅಧೀನದಲ್ಲಿರುವ ಸಂಜಯ್ ಗಾಂಧಿ ವೈದ್ಯವಿಜ್ಞಾನ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಲ್ಲಿ ಚೌಹಾಣ್ ಗೆ ಸರಿಯಾದ ಚಿಕಿತ್ಸೆ ನೀಡಿರಲಿಲ್ಲ ಎಂದು ಸಾಜನ್ ಉತ್ತರಪ್ರದೇಶ ವಿಧಾನ ಪರಿಷತ್ ನಲ್ಲಿ ಆರೋಪಿಸಿದ್ದಾರೆ.
ಹೀಗಾಗಿ ವೈದ್ಯರ ನಿರ್ಲ್ಯಕ್ಷದಿಂದಲೇ ಚೌಹಾಣ್ ಸಾವನ್ನಪ್ಪಿದರು ಎಂದು ಸಾಜನ್ ಆರೋಪಿಸಿದ್ದಾರೆ. ಅವರನ್ನು ಇನ್ನೊಂದು ಆಸ್ಪತ್ರೆಗೆ ಸಾಗಿಸುವಾಗ ಅವರ ಸ್ಥಿತಿ ಚಿಂತಾಜನಕವಾಗಿತ್ತು ಎಂದು ಅವರು ವಿವರಿಸಿದ್ದಾರೆ. ಸಾಜನ್ ಆರೋಪದ ಬಳಿಕ ಆಸ್ಪತ್ರೆ ಮೂಲಗಳು ಈಗ ಘಟನೆಯ ಬಗ್ಗೆ ತನಿಖೆಗೆ ಮುಂದಾಗಿದ್ದಾರೆ.