ಉದ್ಯಮಿಗಳ ಕುರಿತಾಗಿ ಬಿಜೆಪಿ ಸಂಸದರೊಬ್ಬರು ಮಾತನಾಡಿದ್ದಾರೆ.
									
										
								
																	
ಕೊರೊನಾ ಸಂಕಷ್ಟದ  ಈ ಸವಾಲುಗಳನ್ನೇ ಅವಕಾಶಗಳನ್ನಾಗಿ ಪರಿವರ್ತನೆ ಮಾಡಿಕೊಳ್ಳುವ ಅನಿವಾರ್ಯತೆ ಉಂಟಾಗಿದೆ ಎಂದು ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದ್ದಾರೆ.
									
			
			 
 			
 
 			
			                     
							
							
			        							
								
																	ದಾವಣಗೆರೆಯಲ್ಲಿ ಉದ್ಯಮಗಳ ಸ್ಥಾಪನೆ ಮತ್ತು ಉದ್ಯೋಗ ಸೃಷ್ಠಿಸುವ ಕುರಿತಾಗಿ ಕರ್ನಾಟಕ ಮೂಲದ ವಿದೇಶಿ ಉದ್ಯಮಿಗಳು ದಾವಣಗೆರೆಯಲ್ಲಿ ಹೂಡಿಕೆ ಮಾಡಿದರೆ ಮೂಲಸೌಲಭ್ಯ ಕಲ್ಪಿಸುವ ಹೊಣೆ ನಮ್ಮದು ಎಂದಿದ್ದಾರೆ.
									
										
								
																	ದಾವಣಗೆರೆ ಕರ್ನಾಟಕದ ಮಧ್ಯೆ ಭಾಗದಲ್ಲಿದ್ದು, ರೈಲ್ವೆ ಹಾಗು ಹೆದ್ದಾರಿಯೊಂದಿಗೆ ಉತ್ತಮ ಸಂಪರ್ಕ ಹೊಂದಿದೆ, ಉಡಾನ್ ಯೋಜನೆಯಡಿ ಪ್ರತಿ ನೂರು ಕಿ.ಮೀ.ಗೆ ಒಂದರಂತೆ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡುವ ಗುರಿ ಕೇಂದ್ರ ಸರ್ಕಾರಕ್ಕೆ ಇರುವುದರಿಂದ ದಾವಣಗೆರೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಬಗ್ಗೆ  ಕಾರ್ಯೋನ್ಮುಖನಾಗಿರುವುದಾಗಿ ತಿಳಿಸಿದ್ದಾರೆ.