ಕೆಲಸ ಸಿಗದ ಕಾರಣಕ್ಕಾಗಿ ಯುವಕನೊಬ್ಬ ಮಾಡಬಾರದ ಕೆಲಸ ಮಾಡಿದ್ದಾನೆ.
ಕೆಲಸಕ್ಕಾಗಿ ಅಲೆದು ಅಲೆದು ಬೇಸತ್ತ ಯುವಕನೊಬ್ಬ ಕಳ್ಳತನಕ್ಕೆ ಇಳಿದಿದ್ದನು.
ಎಂಬಿಎ ಓದಿದ್ದರೂ ಕೆಲಸ ಮಾತ್ರ ಸಿಕ್ಕಿರಲಿಲ್ಲ. ಸಾಲ ಬೇರೆ ದಿನೇ ದಿನೇ ಬೆಳೆಯುತ್ತಿತ್ತು.
ಸಾಲದ ಕಾಟ ಹಾಗೂ ಉದ್ಯೋಗ ಸಿಗದೇ ಹತಾಶನಾಗಿದ್ದ ಯುವಕನ ವಿರುದ್ಧ ಹಲವು ಕಳ್ಳತನ ಕೇಸ್ ಗಳು ದಾಖಲಾಗಿವೆ.
ದಿಢೀರ್ ಶ್ರೀಮಂತರಾಗೋದು ಹೇಗೆ ಅಂತ ಯೂಟ್ಯೂಬ್ ನಲ್ಲಿ ಸರ್ಚ್ ಮಾಡುತ್ತಿದ್ದಾಗ ಕಳ್ಳತನ ಮಾಡುವ ವಿಡಿಯೋ ನೋಡಿ ಅದರಿಂದ ಪ್ರಭಾವಿತನಾಗಿದ್ದಾನೆ.
ಸಾಲ ತೀರಿಸಲು ಹಾಗೂ ಐಶಾರಾಮಿ ಬದುಕಿನ ಆಸೆಗೆ ಕಳ್ಳತನ ದಾರಿ ತುಳಿದಿದ್ದು, ಆರೋಪಿ ವಿಶಾಖಪಟ್ಟಣದಲ್ಲಿ ಬಂಧಿತನಾಗಿದ್ದಾನೆ.
ಕಳ್ಳತನಕ್ಕೆ ಇಳಿದಿದ್ದ ವಿನೋದ್ ರಾಜ್ ಎಂಬಾತನನ್ನು ಪೊಲೀಸರು ಬಂಧನ ಮಾಡಿದ್ದಾರೆ.