Select Your Language

Notifications

webdunia
webdunia
webdunia
webdunia

ಫಿನಾಯಿಲ್ ವಾಸನೆ ತೋರಿಸಿ ಮನೆ ದೋಚಿದ ಖದೀಮರು

ಫಿನಾಯಿಲ್ ವಾಸನೆ ತೋರಿಸಿ ಮನೆ ದೋಚಿದ ಖದೀಮರು
ಗದಗ , ಮಂಗಳವಾರ, 4 ಆಗಸ್ಟ್ 2020 (14:12 IST)
ಫಿನಾಯಿಲ್ ಸೇರಿದಂತೆ ಇತರೆ ವಾಸನೆಯಂತಹ ದ್ರಾವಣ ಮಾರಾಟ ಮಾಡುವ ನೆಪದಲ್ಲಿ ಖದೀಮರು ಮನೆಗಳನ್ನು ದೋಚುತ್ತಿದ್ದಾರೆ.

ಸಂಶಯಾಸ್ಪದ ಅಪರಿಚಿತ ಮಹಿಳೆಯರು ಮನೆ ಅಥವಾ ಓಣಿಗಳಲ್ಲಿ ಕಂಡು ಬಂದರೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಪೂರ್ವಾಪರ ತಿಳಿದುಕೊಳ್ಳದೇ, ಅಪರಿಚಿರೊಂದಿಗೆ ವ್ಯವಹರಿಸಬಾರದು ಎಂದು ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕ ಯತೀಶ್ ಎನ್. ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆ ಗೋಲಗುಂಬಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ  6 ಜನ ಅಪರಿಚಿತ ಮಹಿಳೆಯರು ಫಿನಾಯಿಲ್ ಮಾರುವ ನೆಪದಲ್ಲಿ ಮನೆಗಳಿಗೆ ಹೋಗಿ, ಮನೆಯಲ್ಲಿರುವವರಿಗೆ ಫಿನಾಯಿಲ್ ಎಂದು ಯಾವುದೋ ದ್ರಾವಣದ ವಾಸನೆ ತೋರಿಸಿದ್ದಾರೆ.

ಫಿನಾಯಿಲ್ ವಾಸನೆ ತೆಗೆದುಕೊಂಡಾಕ್ಷಣ ಮನೆಯವರು ಮೂರ್ಛೆ ಹೋಗಿದ್ದಾರೆ. ನಂತರ ಮನೆಯೊಳಗೂ ಪ್ರವೇಶ ಮಾಡಿ ಅಲ್ಲಿರುವವರಿಗೂ ಮೂರ್ಛೆ ಹೋಗುವ ದ್ರಾವಣ ಸಿಂಪಡಿಸಿ ಮನೆಯಲ್ಲಿದ್ದ ಸುಮಾರು 4 ತೊಲೆಯಷ್ಟು ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.

ಹೀಗಾಗಿ ಗದಗ ಜಿಲ್ಲೆಯ ಜನರು ಅಪರಿಚಿತ ವ್ಯಕ್ತಿಗಳು ಫಿನಾಯಿಲ್ ಹಾಗೂ ಇನ್ನಿತರ ದ್ರಾವಣ ಮಾರಾಟ ಮಾಡಲು ಬಂದಾಗ ವಾಸನೆ ತೆಗೆದುಕೊಳ್ಳದೇ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕಿರುಕುಳ ಕೊಡುತ್ತಿದ್ದ ಗಂಡನಿಗೆ ತಲಾಖ್ ಕೊಟ್ಟ ಮುಸ್ಲಿಂ ಮಹಿಳೆ