ದೇಶ ಕಾಯುವ ಯೋಧನ ಕುಟುಂಬಕ್ಕೆ ಆಗಬಾರದ ಘಟನೆ ಆಗಿ ಹೋಗಿದೆ.
ಯೋಧನ ಪತ್ನಿ ಹಾಗೂ ಅತ್ತೆಯನ್ನು ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ತಮಿಳುನಾಡಿನ ಮಧುರೈನ ಶಿವಗಂಗಾದಲ್ಲಿ ಅಮಾನವೀಯ ಘಟನೆ ನಡೆದಿದ್ದು, ಯೋಧನ ಪತ್ನಿ ಸ್ನೇಹಾ ಹಾಗೂ ಅತ್ತೆ ರಾಜಕುಮಾರಿ ಕೊಲೆಯಾಗಿದ್ದಾರೆ.
ತಡರಾತ್ರಿ ಕೊಲೆ ನಡೆದಿದ್ದು, 7 ತಿಂಗಳ ಮಗು ಅಳುವುದಕ್ಕೆ ಆರಂಭಿಸಿದಾಗ ನೆರೆಹೊರೆಯವರಿಗೆ ವಿಷಯ ತಿಳಿದಿದೆ.