Select Your Language

Notifications

webdunia
webdunia
webdunia
webdunia

ಆಸ್ತಿಗಾಗಿ ಅತ್ತೆ ಮಾವನ ಮುಖಕ್ಕೆ ಚಾಕು ಇರಿದ ಸೊಸೆ

ಆಸ್ತಿಗಾಗಿ ಅತ್ತೆ ಮಾವನ ಮುಖಕ್ಕೆ ಚಾಕು ಇರಿದ ಸೊಸೆ
ನವದೆಹಲಿ , ಶನಿವಾರ, 25 ಏಪ್ರಿಲ್ 2020 (06:53 IST)

ನವದೆಹಲಿ : ಆಸ್ತಿ ವಿಚಾರಕ್ಕೆ ಸೊಸೆಯೊಬ್ಬಳು ಅತ್ತೆ ಮಾವನ ಕತ್ತು ಹಿಸುಕಿ ಅವರ  ಮುಖವನ್ನು ಚಾಕುವಿನಿಂದ ಕಟ್ ಮಾಡಿ ಕೊಲೆ ಮಾಡಿದ ಘಟನೆ ಪಶ್ಚಿಮ ದೆಹಲಿಯ ಚಾವ್ಲಾ ಪ್ರದೇಶದಲ್ಲಿ ನಡೆದಿದೆ.

 

ರಾಜ್ ಸಿಗ್(61), ಓಂವತಿ(58) ಕೊಲೆಯಾದ ಅತ್ತೆ ಮಾವ, ಕವಿತಾ ಕೊಲೆ ಮಾಡಿದ ಸೊಸೆ. ಆಸ್ತಿಯ ವಿಚಾರಕ್ಕೆ ಈ ಕುಟುಂಬದ ಮಧ್ಯೆ ಆಗಾಗ ಜಗಳ ನಡೆಯುತ್ತಿದ್ದು, ಕೋಪಗೊಂಡ ಕವಿತಾ ಇಂತಹ ದುಷ್ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ. ಆ ವೇಳೆ ಆಕೆಯ ಪತಿ ಹಾಗೂ ಮಕ್ಕಳು ಮನೆಯಲ್ಲಿಯೇ ಇದ್ದಿದ್ದರು  ಎನ್ನಲಾಗಿದೆ.

 

ಈ ಕುಟುಂಬ ಈಗ ನಾಪತ್ತೆಯಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆಸ್ತಿ ವಿಚಾರಕ್ಕೆ ಕೊಲೆ ನಡೆದಿದೆ ಎಂಬ ವಿಚಾರ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕಣ್ಣುಗಳಿಗೆ ಚಾಕುವಿನಿಂದ ಇರಿದ ಕಾಮುಕರು