Select Your Language

Notifications

webdunia
webdunia
webdunia
webdunia

ನೀರು ಕದ್ದವರು ಜೈಲಿಗೆ ಹೋಗ್ತಾರೆ ಎಂದ ಡಿಸಿ

ನೀರು ಕದ್ದವರು ಜೈಲಿಗೆ ಹೋಗ್ತಾರೆ ಎಂದ ಡಿಸಿ
ರಾಯಚೂರು , ಶುಕ್ರವಾರ, 24 ಜುಲೈ 2020 (22:29 IST)
ಇನ್ಮುಂದೆ ಯಾರೇ ನೀರು ಕದ್ದರೂ ಅವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲಾಗುತ್ತದೆ.

ಹೀಗಂತ ರಾಯಚೂರು ಡಿಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸೂಚನೆ, ಎಚ್ಚರಿಕೆ ನೀಡಿದಾಗ್ಯೂ ನೀರುಗಳ್ಳರು ಎಚ್ಚೆತ್ತುಕೊಳ್ಳುತ್ತಿಲ್ಲ. ಹೀಗಾಗಿ ಪೈಪ್‌ಗಳನ್ನು ಕಿತ್ತು ಹಾಕಿ, ವಿದ್ಯುತ್ ಸಂಪರ್ಕ  ಕಡಿತಗೊಳಿಸಿ ಪರಿವರ್ತಕ ತೆರವುಗೊಳಿಸಿ, ಇದಕ್ಕೂ ಸಾಧ್ಯವಾಗದಿದ್ದರೆ ಅಕ್ರಮ ನೀರಾವರಿ ಮಾಡಿಕೊಂಡವರ ವಿರುದ್ದ ಕ್ರಿಮಿನಲ್ ದೂರು ದಾಖಲಿಸಿ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ಎಡಭಾಗ, ಉಪಕಾಲುವೆಗಳ ಬಲಭಾಗದಲ್ಲಿ ನಡೆಯುತ್ತಿರುವ ಅಕ್ರಮ ನೀರಾವರಿ ಕಡಿವಾಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

ಅಕ್ರಮ ನೀರಾವರಿ ಕುರಿತಂತೆ ನೀರಾವರಿ ಇಲಾಖೆ ವಿಶೇಷ ಕಾಳಜಿವಹಿಸಿ ಕೆಲಸ ಮಾಡಬೇಕು. ತುರ್ವಿಹಾಳ, ಮಸ್ಕಿ ಉಪವಿಭಾಗದ ವ್ಯಾಪ್ತಿಯಲ್ಲಿ ಗುರುತಿಸಿರುವ 247 ಅನಧಿಕೃತ ಪಂಪ್‌ಸೆಟ್‌ಗಳನ್ನು ಕಿತ್ತು ಹಾಕಬೇಕು. ಬಳಸುತ್ತಿರುವ ನೀರಿನ ಮೂಲ ಯಾವುದು ಎಂದು ಕಂಡುಕೊಳ್ಳಬೇಕು. ಅಕ್ರಮ ಕಂಡುಬಂದಲ್ಲಿ ತಕ್ಷಣವೇ ಅಂತಹವರ  ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಜರುಗಿಸಿ ಎಂದು ನೀರಾವರಿ ಇಲಾಖೆಯ ಇಇ ಪ್ರಕಾಶರಾವ್‌ರಿಗೆ ಸೂಚನೆ ನೀಡಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್‌ನಲ್ಲಿ ಕಾರ್ಗಿಲ್ ವಿಜಯೋತ್ಸವ ಸಂಭ್ರಮಾಚರಣೆ