ನವದೆಹಲಿ: ನಿನ್ನೆ ತಡರಾತ್ರಿ ಲೋಕಸಭೆಯಲ್ಲಿ ವಕ್ಫ್ ಬಿಲ್ ಪಾಸ್ ಮಾಡಲಾಗಿದೆ. ಆದರೆ ಇದರ ಬಗ್ಗೆ ವಿವಾದಗಳಿರುವಾಗಲೇ ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ವಕ್ಫ್ ಕಾಯಿದೆ ತಿದ್ದುಪಡಿ ಬಗ್ಗೆ ಹೇಳಿರುವ ಹಳೇ ವಿಡಿಯೋವೊಂದು ವೈರಲ್ ಆಗಿದೆ.
ಆರ್ ಜೆಡಿ ಈಗ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷವಾಗಿದೆ. ಈ ಪಕ್ಷವೂ ಈಗ ವಕ್ಫ್ ತಿದ್ದುಪಡಿ ಬಿಲ್ ನ್ನು ವಿರೋಧಿಸುತ್ತಿದೆ. ಆದರೆ ಈ ಹಿಂದೆ ಲಾಲೂ ಪ್ರಸಾದ್ ಯಾದವ್ ಸಂಸತ್ತಿನಲ್ಲೇ ನೀಡಿರುವ ಹೇಳಿಕೆಯೊಂದು ಈಗ ವೈರಲ್ ಆಗಿದೆ.
ಸಂಸತ್ ನಲ್ಲಿ ಲಾಲೂ ಪ್ರಸಾದ್ ಯಾದವ್, ವಕ್ಫ್ ಕಾಯಿದೆಗೆ ತಿದ್ದುಪಡಿ ತರಬೇಕಿದೆ ಎಂದು ಭಾಷಣ ಮಾಡಿದ್ದರು. ವಕ್ಫ್ ಬೋರ್ಡ್ ಸರ್ಕಾರದ ಆಸ್ತಿಯನ್ನೂ ತನ್ನದು ಎಂದು ವಶಪಡಿಸಿಕೊಂಡಿದೆ. ಇದರ ವಿರುದ್ಧ ಕಠಿಣ ಕಾನೂನು ಮಾಡಬೇಕು ಎಂದು ಭಾಷಣ ಮಾಡಿದ್ದರು. ಅವರ ಈ ಭಾಷಣ ಈಗ ವೈರಲ್ ಆಗಿದೆ.
ಈ ಭಾಷಣ ಅವರು 2010 ರಲ್ಲಿ ಪಾರ್ಲಿಮೆಂಟ್ ನಲ್ಲಿ ಮಾಡಿದ ಭಾಷಣವಾಗಿದೆ. ಆಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. ಆಗ ಸರಿ ಎನಿಸಿದ್ದು ಆರ್ ಜೆಡಿಗೆ ಈಗ ತಪ್ಪು ಎನಿಸುತ್ತಿದೆಯಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.