Select Your Language

Notifications

webdunia
webdunia
webdunia
webdunia

Waqf Bill: ರಾತ್ರೋ ರಾತ್ರಿ ಲೋಕಸಭೆಯಲ್ಲಿ ಪಾಸ್ ಆದ ವಕ್ಫ್ ಬಿಲ್

waqf bill

Krishnaveni K

ನವದೆಹಲಿ , ಗುರುವಾರ, 3 ಏಪ್ರಿಲ್ 2025 (08:58 IST)
ನವದೆಹಲಿ: ಪ್ರತಿಪಕ್ಷಗಳ ವಿರೋಧದ ನಡುವೆಯೂ ನಿನ್ನೆ ಸಂಸತ್ತಿನಲ್ಲಿ ಬಹುಚರ್ಚಿತ ವಕ್ಫ್ ತಿದ್ದುಪಡಿ ಬಿಲ್ ರಾತ್ರೋ ರಾತ್ರಿ ಪಾಸ್ ಆಗಿದೆ. ಮಸೂದೆ ಪರ 288 ಮತ ಬಂದಿತ್ತು.

ಒಟ್ಟು ನಿನ್ನೆ ಮಧ್ಯಾಹ್ನ ಕಾನೂನು ಸಚಿವ ಕಿರಣ್ ರಿಜಿಜು ವಕ್ಫ್ ತಿದ್ದುಪಡಿ ಬಿಲ್ ಮಂಡನೆ ಮಾಡಿದರು. ಈ ವೇಳೆ ವಿಪಕ್ಷಗಳು ಭಾರೀ ಗದ್ದಲವೆಬ್ಬಿಸಿವೆ. ಬಳಿಕ 13 ತಾಸು ಮಸೂದೆ ಬಗ್ಗೆ ಚರ್ಚೆ ನಡೆಯಿತು. ಈ ವೇಳೆಯೂ ವಿಪಕ್ಷಗಳಿಂದ ಸಾಕಷ್ಟು ಗದ್ದಲವಾಗಿದೆ.

ಆದರೆ ಇದೆಲ್ಲದರ ನಡುವೆಯೂ ಸ್ಪೀಕರ್ ಮಸೂದೆಯನ್ನು ಮತಕ್ಕೆ ಹಾಕಿದರು. ಈ ವೇಳೆ ಒಟ್ಟು 288 ಸದಸ್ಯರು ಮಸೂದೆ ಪರ ಮತ ಹಾಕಿದರೆ 232 ಸದಸ್ಯರು ವಿರುದ್ಧ ಮತ ಹಾಕಿದರು. ತಡರಾತ್ರಿ 1.43 ಕ್ಕೆ ಮತದಾನ ನಡೆಯಿತು.

ತಡರಾತ್ರಿಯಾಗಿದ್ದರೂ ಬಹು ಮಹತ್ವದ ಮಸೂದೆ ಮಂಡನೆಯಾಗಿದ್ದರಿಂದ 500 ಕ್ಕೂ ಹೆಚ್ಚು ಸದಸ್ಯರು ಸದನದಲ್ಲಿ ಹಾಜರಿದ್ದಿದ್ದು ವಿಶೇಷವಾಗಿತ್ತು. ವಕ್ಫ್ ಹೊಸ ವಿದೇಯಕಕ್ಕೆ ಈಗ ‘ಉಮೀದ್’ ಎಂದು ಹೆಸರಿಡಲಾಗಿದೆ. ಇಂದು ರಾಜ್ಯಸಭೆಯಲ್ಲಿ ಮಸೂದೆ ಮಂಡನೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಇಂದು ಬೆಂಗಳೂರು ಸೇರಿದಂತೆ ಈ ಜಿಲ್ಲೆಗಳಲ್ಲಿ ಮಳೆ