ನವದೆಹಲಿ: ಇಂದು ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಬಿಲ್ ಮಂಡನೆಯಾಗುತ್ತಿದ್ದಂತೇ ಕೆಲವು ಮುಸ್ಲಿಂ ಮಹಿಳೆಯರ ಗುಂಪು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಲ್ಲದೇ ಥ್ಯಾಂಕ್ಯೂ ಮೋದಿಜಿ ಎಂದಿದ್ದಾರೆ. ಈ ವಿಡಿಯೋಗಳು ಈಗ ವೈರಲ್ ಆಗಿದೆ.
ವಕ್ಫ್ ತಿದ್ದುಪಡಿ ಬಿಲ್ ಮಂಡಿಸುವುದಕ್ಕೆ ಮುಸ್ಲಿಮರಿಂದ ತೀವ್ರ ವಿರೋಧವಿದೆ. ಇದು ಮುಸ್ಲಿಮರ ವೈಯಕ್ತಿಕ ಹಕ್ಕುಗಳನ್ನು ಕಸಿಯುವ ಯತ್ನ ಎಂದು ಮುಸ್ಲಿಂ ಮೌಲ್ವಿಗಳು ಈಗಾಗಲೇ ಆಕ್ರೋಶ ವ್ಯಕ್ತಪಡಿಸಿವೆ. ಇದರ ನಡುವೆಯೂ ಕೇಂದ್ರ ಸರ್ಕಾರ ಇಂದು ತಿದ್ದುಪಡಿ ಬಿಲ್ ಮಂಡಿಸಿತು.
ಇದರ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಮುಸ್ಲಿಂ ಮಹಿಳೆಯರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದು, ವಕ್ಫ್ ಗೆ ತಿದ್ದುಪಡಿ ಮಾಡಿರುವುದನ್ನು ಸ್ವಾಗತಿಸಿದ್ದಾರೆ. ಇದಲ್ಲದೆ ಇನ್ನೂ ಕೆಲವೆಡೆ ಮುಸ್ಲಿಮರೇ ಬಿಲ್ ಸ್ವಾಗತಿಸಿ ಸಂಭ್ರಮಾಚರಣೆ ಮಾಡಿದ್ದಾರೆ.
ದೆಹಲಿಯ ನಿಜಾಮುದ್ದೀನ್ ದರ್ಗಾ ಬಳಿ ಪ್ರಧಾನಿ ಮೋದಿ ಬ್ಯಾನರ್ ಹಾಕಿ ವಕ್ಫ್ ಬಿಲ್ ಮಂಡಿಸಿರುವುದನ್ನು ಸ್ವಾಗತಿಸಿದ್ದಾರೆ. ವಕ್ಫ್ ನಿಯಮಗಳಿಗೆ ತಿದ್ದುಪಡಿ ತಂದಿರುವುದಕ್ಕೆ ಮೋದಿಜಿಗೆ ಧನ್ಯವಾದ ಎಂದಿದ್ದಾರೆ.