Select Your Language

Notifications

webdunia
webdunia
webdunia
webdunia

ಮೋದಿ, ನಾನು ಫ್ರೆಂಡ್ ಎನ್ನುತ್ತಲೇ ಭಾರತದ ವಸ್ತುಗಳಿಗೆ ಸುಂಕದ ಪಿನ್ ಇಟ್ಟ ಡೊನಾಲ್ಡ್ ಟ್ರಂಪ್

Donald Trump

Krishnaveni K

ನ್ಯೂಯಾರ್ಕ್ , ಗುರುವಾರ, 3 ಏಪ್ರಿಲ್ 2025 (10:46 IST)
ನ್ಯೂಯಾರ್ಕ್: ಭಾರತ ನಮ್ಮ ಮಿತ್ರರಾಷ್ಟ್ರ, ಮೋದಿ ನನ್ನ ಸ್ನೇಹಿತ ಎಂದು ಹೇಳುತ್ತಲೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಮ್ಮ ದೇಶದ ವಸ್ತುಗಳಿಗೆ 26% ಸುಂಕ ವಿಧಿಸುವ ಮೂಲಕ ಗುನ್ನ ಕೊಟ್ಟಿದ್ದಾರೆ.

ಅಮೆರಿಕಾ ಅಧ್ಯಕ್ಷರಾಗಿ ನೇಮಕವಾದ ಬೆನ್ನಲ್ಲೇ ಮೋದಿ ಅಮೆರಿಕಾ ಪ್ರವಾಸ ಮಾಡಿದ್ದರು. ಈ ಹಿಂದಿನ ಅವಧಿಯಲ್ಲೂ ಟ್ರಂಪ್ ಅನೇಕ ಬಾರಿ ಮೋದಿ ನನ್ನ ಸ್ನೇಹಿತ ಎನ್ನುತ್ತಿದ್ದರು. ಈ ಬಾರಿಯೂ ಮೋದಿ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದರು.

ಆದರೆ ಮಿತ್ರ ಮಿತ್ರ ಎನ್ನುತ್ತಲೇ ಈಗ ಸುಂಕದ ಬರೆ ಎಳೆದಿದ್ದಾರೆ. ಶ್ವೇತಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ. ಎಲ್ಲಾ ದೇಶಗಳಿಗೆ ಅಮೆರಿಕಾದ ಪ್ರತಿ ಸುಂಕ ಘೋಷಣೆ ಮಾಡಿದ್ದಾರೆ. ಈ ವೇಳೆ ಭಾರತದ ವಸ್ತುಗಳಿಗೆ 26% ಪ್ರತಿಸುಂಕ ವಿಧಿಸಲಿರುವುದಾಗಿ ಘೋಷಣೆ ಮಾಡಿದ್ದಾರೆ.

ಭಾರತ ಮತ್ತು ಚೀನಾ ದೇಶವು ನಮಗೆ ವಿಧಿಸುವ ಸುಂಕದ ಅರ್ಧದಷ್ಟು ನಾವು ಅವರಿಗೆ ಪ್ರತಿಸುಂಕ ವಿಧಿಸಲಿದ್ದೇವೆ. ಭಾರತಕ್ಕೆ 26%, ಚೀನಾಗೆ 34% ಪ್ರತಿಸುಂಕ ವಿಧಿಸುವುದಾಗಿ ಘೋಷಣೆ ಮಾಡಿದ್ದಾರೆ. ಭಾರತ ಅಲ್ಲಿನ ವಸ್ತುಗಳಿಗೆ 52% ಸುಂಕ ವಿಧಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕಾ 26% ಸುಂಕ ವಿಧಿಸಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ನೂ ನಿಂತಿಲ್ಲ ಬೆಲೆ ಏರಿಕೆ ಪರ್ವ: ಹಾಲು, ಡೀಸೆಲ್, ಬಸ್ ಬಳಿಕ ಈಗ ಇದೊಂದು ಬೆಲೆ ಏರಿಕೆ ಬಾಕಿ