Select Your Language

Notifications

webdunia
webdunia
webdunia
webdunia

Waqf Bill ಸಂವಿಧಾನ ಬಾಹಿರ ಎಂದ ವಿಪಕ್ಷಗಳತ್ತ ಬೆಂಕಿ ಕಾರಿದ ಅಮಿತ್ ಶಾ: ವಿಡಿಯೋ

Amit Shah

Krishnaveni K

ನವದೆಹಲಿ , ಗುರುವಾರ, 3 ಏಪ್ರಿಲ್ 2025 (10:05 IST)
ನವದೆಹಲಿ: ವಕ್ಫ್ ಬಿಲ್ ಸಂವಿಧಾನ ಬಾಹಿರ ಎಂದು ಟೀಕಿಸುತ್ತಿರುವ ವಿಪಕ್ಷಗಳಿಗೆ ಗೃಹಸಚಿವ ಅಮಿತ್ ಶಾ ನಿನ್ನೆ ಸಂಸತ್ ನಲ್ಲಿ ಬೆಂಕಿ ಕಾರಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ.
 
ವಕ್ಫ್ ತಿದ್ದುಪಡಿ ಬಿಲ್ ಗೆ ಇಂಡಿಯಾ ಒಕ್ಕೂಟದ ನಾಯಕರು ವಿರೋಧ ವ್ಯಕ್ತಪಡಿಸುತ್ತಲೇ ಇದ್ದಾರೆ. ಇದು ಸಂವಿಧಾನಬಾಹಿರ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇಂಡಿಯಾ ಒಕ್ಕೂಟದ ನಾಯಕರು ಆಕ್ರೋಶ ವ್ಯಕ್ತಪಡಿಸಿವೆ.
 
ನಿನ್ನೆ ಮಸೂದೆ ಮಂಡನೆ ಮಾಡುವಾಗ ವಿಪಕ್ಷ ಸದಸ್ಯರು ಗದ್ದಲವೆಬ್ಬಿಸಿದ್ದಾರೆ. ಬಳಿಕ ಸ್ಪೀಕರ್ ಮತಕ್ಕೆ ಹಾಕಿದರೂ ವಿಧೇಯಕದ ವಿರುದ್ಧ ಮತ ಚಲಾಯಿಸಿದ್ದಾರೆ. 

ಓರ್ವ ಮುಸ್ಲಿಂ ಸಮುದಾಯದ ಸಂಸದರಂತೂ ಇದು ಸಂವಿಧಾನ ಬಾಹಿರ. ಇದನ್ನು ದೇಶದ ಅಲ್ಪಸಂಖ್ಯಾತರು ವಿರೋಧಿಸಲಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಇದಕ್ಕೆ ಸಿಟ್ಟಿಗೆದ್ದ ಅಮಿತ್ ಶಾ ತಕ್ಕ ಉತ್ತರ ನೀಡಿದರು.

‘ಇಲ್ಲಿರುವ ಓರ್ವ ಅಲ್ಪಸಂಖ್ಯಾತ ಸಮುದಾಯದ ಸಂಸದರು ಈ ಬಿಲ್ ನ್ನು ಅಲ್ಪಸಂಖ್ಯಾತರು ವಿರೋಧಿಸಲಿದ್ದಾರೆ ಎನ್ನುತ್ತಾರೆ. ಏನು ಹೇಳ್ತಿದ್ದೀರಿ ಎನ್ನುವ ಅರಿವು ನಿಮಗಿದೆಯೇ? ಸಂಸತ್ತಿನಲ್ಲಿ ಮಾಡುವ ಕಾನೂನುಗಳು ಇಡೀ ದೇಶಕ್ಕೆ ಅನ್ವಯ. ಅದನ್ನು ಎಲ್ಲರೂ ಪಾಲಿಸಲಬೇಕು. ವಿರೋಧಿಸುತ್ತೇವೆ, ಸಂವಿಧಾನ ಬಾಹಿರ ಎನ್ನುವ ಮೂಲಕ ಏನು ಸಂದೇಶ ಕೊಡಲು ಹೊರಟಿದ್ದೀರಿ’ ಎಂದು ವೀರಾವೇಶದಿಂದ ತಿರುಗೇಟು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Waqf ಕಾನೂನು ಹಿಂದೆ ಹೇಗಿತ್ತು, ಈಗ ಏನಾಗಿದೆ, ನಿಜವಾಗಿಯೂ ಇದು ಮುಸ್ಲಿಮರಿಗೆ ಮಾರಕವೇ: ಇಲ್ಲಿದೆ ಡೀಟೈಲ್ಸ್